Ad Widget .

ಸಾರಿಗೆ ನೌಕರರಿಗೆ ಗುಡ್ ನ್ಯೂಸ್| ಚುನಾವಣೆ ಬಳಿಕ ವೇತನ ಪರಿಷ್ಕರಣೆಗೆ ಚಿಂತನೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ 4 ವರ್ಷಗಳಿಗೊಮ್ಮೆ ನಡೆಯುವ ಸಾರಿಗೆ ನೌಕರರ ವೇತನ ಪರಿಷ್ಕರಣೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಬಾರಿಯೂ ಶೇ. 12ರಿಂದ 15ರಷ್ಟು ವೇತನ ಹೆಚ್ಚಳ ಮಾಡುವ ಸಂಬಂಧ ಚಿಂತನೆ ನಡೆದಿದೆ.

Ad Widget . Ad Widget .

ಕಳೆದ ಬಾರಿ ಅಂದರೆ 2023ರಲ್ಲಿ ಸರಕಾರ ಅಳೆದು-ತೂಗಿ ಶೇ.15ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಇದು 2020ರ ಜ. 1ರಿಂದ ಪೂರ್ವಾನ್ವಯ ಆಗುವಂತೆ ಆದೇಶ ಹೊರಡಿಸಲಾಗಿತ್ತು. ಇದರಲ್ಲಿ 38 ತಿಂಗಳ ವೇತನ ಪರಿಷ್ಕರಣೆಯ ಬಾಕಿ ಇನ್ನೂ ಪಾವತಿ ಮಾಡಬೇಕಿದೆ. ಅಷ್ಟರಲ್ಲಿ ಮತ್ತೂಂದು ಪರಿಷ್ಕರಣೆ ಸಮಯ ಬಂದಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈಗ ಮೂರು ವರ್ಷಗಳ ಹಿಂಬಾಕಿ ಸಹಿತ ಮುಂದಿನ ನಾಲ್ಕು ವರ್ಷದ ವೇತನ ಹೆಚ್ಚಳ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

Ad Widget . Ad Widget .

ಸಾರ್ವತ್ರಿಕ ಚುನಾವಣೆಯು ಸರಕಾರಕ್ಕೆ ತುಸು ನೆಮ್ಮದಿ ನೀಡಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಈ ಸಂಬಂಧದ ಚರ್ಚೆ ಆರಂಭವಾಗಿದೆ. ಈಗಾಗಲೇ ಸಾರಿಗೆ ನೌಕರರ ವಿವಿಧ ಸಂಘಟನೆಗಳು ಸಾರಿಗೆ ಸಚಿವರು ಮತ್ತು ಕೆಎಸ್ಸಾರ್ಟಿಸಿ ಆಡಳಿತ ಮಂಡಳಿ ಯನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ. ಅದರ ಮೇಲೆ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯೂ ನಡೆದಿದೆ. ಆದರೆ ನೀತಿಸಂಹಿತೆ ಅನಂತರ ಈ ಸಂಬಂಧದ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

Leave a Comment

Your email address will not be published. Required fields are marked *