Ad Widget .

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್| ಸಾವಿನ ಸುತ್ತ ಅನುಮಾನದ ಹುತ್ತ

ಸಮಗ್ರ ನ್ಯೂಸ್: ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಪರಿಣಾಮ, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದ ಕಾಫಿ ತೋಟದಲ್ಲಿ ದುರ್ಘಟನೆ ನಡೆದಿದೆ.

Ad Widget . Ad Widget .

ಕೆರೆಮಕ್ಕಿ ಗ್ರಾಮದ ಸಂಜು (33) ಸಾವಿಗೀಡಾದ ಯುವಕ. ಕಾಫಿ ತೋಟದ ಅಂಚಿನಲ್ಲಿರುವ ಕಾಡಿಗೆ ಅಕ್ರಮವಾಗಿ ಪ್ರಾಣಿ ಬೇಟೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ಇದೇ ಥರ ಅಕ್ರಮ ಬೇಟೆಗೆ ಬಂದವರು ಯಾವುದೋ ಪ್ರಾಣಿ ಎಂದು ಭಾವಿಸಿ ಗುಂಡು ಹೊಡೆದಿದ್ದರಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.

Ad Widget . Ad Widget .

ಬೇರೆ ಅಪರಾಧದ ಆಯಾಮಗಳ ಕುರಿತು ಕೂಡ ತನಿಖೆ ನಡೆಯುತ್ತಿದೆ. ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *