Ad Widget .

ಜಕಾರ್ತ : ವಿಮಾನದಿಂದ ಇಳಿಯುತ್ತಿದ್ದಾಗ ಆಯಾತಪ್ಪಿ ಕೆಳಗೆ ಬಿದ್ದ ಸಿಬ್ಬಂದಿ

ಸಮಗ್ರ ನ್ಯೂಸ್ : ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಸ್ಟೆಪ್ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ ಪರಿಣಾಮ ಸಿಬ್ಬಂದಿಯೊಬ್ಬರು ವಿಮಾನದಿಂದ ಕೆಳಗೆ ಬಿದ್ದ ಘಟನೆಯೊಂದು ಇಂಡೋನೇಷ್ಯಾದ ಜಕಾರ್ತ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Ad Widget . Ad Widget .

ಸಾಮಾನ್ಯವಾಗಿ ವಿಮಾನದಿಂದ ಇಳಿಯಲು ಹಾಗೂ ಹತ್ತಲು ಕೃತಕ ಏಣಿಯನ್ನು ಬಳಸುತ್ತಾರೆ. ಅಂತೆಯೇ ಇಲ್ಲಿಯೂ ಏಣಿಯನ್ನು ಇಡಲಾಗಿದ್ದು, ಕೆಲ ಹೊತ್ತಿನ ಬಳಿಕ ಸಿಬ್ಬಂದಿ ಅಲ್ಲಿಂದ ತೆಗೆದಿದ್ದಾರೆ. ಇದನ್ನು ಗಮನಿಸದ ವಿಮಾನದ ಒಳಗಡೆ ಇದ್ದ ಸಿಬ್ಬಂದಿ ಇಳಿಯಲು ಯತ್ನಿಸಿದ್ದಾರೆ. ಮೆಟ್ಟಿಲು ಇದೆ ಎಂದು ಭಾವಿಸಿ ಕಾಲಿಟ್ಟಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

Ad Widget . Ad Widget .

ಇಂಡೋನೇಷ್ಯಾದ ಟ್ರಾನ್ಸ್ನುಸಾ ವಿಮಾನದಿಂದ ವ್ಯಕ್ತಿ ಹೊರಬರುತ್ತಿದ್ದಂತೆಯೇ ಕೆಳಗಡೆ ಇದ್ದ ಇತರ ಇಬ್ಬರು ಕಾರ್ಮಿಕರು ಸ್ಟೆಪ್ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ್ದಾರೆ. ಪರಿಣಾಮ ಈ ದುರ್ಘಟನೆ ನಡೆದಿದೆ.

ಈ ಸಿಬ್ಬಂದಿ ವಿಮಾನದಿಂದ ಕೆಳಕ್ಕೆ ಬೀಳುತ್ತಿರುವ ವೀಡಿಯೋವನ್ನು ವೈಮಾನಿಕ ಸಲಹೆಗಾರ ಸಂಜಯ್ ಲಾಜರ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡ ಬಳಿಕ ನೆಟ್ಟಿಗರ ಗಮನಸೆಳೆಯಿತು. ಅಲ್ಲದೇ ಕೂಡಲೇ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

Leave a Comment

Your email address will not be published. Required fields are marked *