ಪತ್ನಿಗೆ ವಿಡಿಯೋ ಕಾಲ್ ನಲ್ಲಿ ಹೆದರಿಸಲು ಹೋಗಿ ಪತಿ ಸಾವು

ಸಮಗ್ರ ನ್ಯೂಸ್: ಪತ್ನಿಗೆ ವಿಡಿಯೋ ಕಾಲ್ ನಲ್ಲಿ ಹೆದರಿಸಲು ಹೋಗಿ ಪತಿ ಸಾವಿಗೆ ಶರಣಾದ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿ. ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗ ಅಮಿತ್ ಸಾವನ್ನಪ್ಪಿದ್ದಾನೆ.

Ad Widget ... ..

ಬಿಹಾರ ಮೂಲದ ಅಮಿತ್ ಜಿಮ್ ಟ್ರೈನರ್ ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ. ಒಂದು ವರ್ಷದ ಹಿಂದೆ ಜಿಮ್ ಸಮೀಪದ ಯುವತಿಯನ್ನು ಪ್ರೀತಿಸಿದ್ದು. ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು. ಆದರೆ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ಪತಿಗೆ ಸಮಯ ನೀಡುತ್ತಿರಲಿಲ್ಲ ಎನ್ನಲಾಗುತ್ತಿದ್ದು, ಫ್ರೆಂಡ್ಸ್‌ ಜೊತೆ ಪದೇ ಪದೇ ಫೋನ್ ಕಾಲ್​ನಲ್ಲಿರುತ್ತಿದ್ದಳು ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಪತ್ನಿ ಬೇರೆಡೆ ವಾಸವಿದ್ದರು. ಮನೆಗೆ ಪತ್ನಿ ವಾಪಾಸ್ ಬರುವಂತೆ ಪತಿ ಅಮಿತ್ ಪದೇ ಪದೇ ಕರೆ ಮಾಡಿ ಮನವಿ ಮಾಡುತ್ತಿದ್ದ. ನಿನ್ನೆ ಕೂಡ ವಿಡಿಯೋ ಕಾಲ್​ನಲ್ಲಿರುವಾಗಲೇ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಸಾವನ್ನಪ್ಪಿದ್ದಾರೆ.

Ad Widget

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು. ಬಳಿಕ ಕುಟುಂಬಸ್ಥರಿಗೆ ಮೃತದೇಹ ರವಾನಿಸಲಾಗುತ್ತದೆ.

Leave a Comment

Your email address will not be published. Required fields are marked *