ಸ್ಕಾಟ್ಲೆಂಡ್ ‌ತಂಡದ ಜೆರ್ಸಿಯಲ್ಲಿ ಮಿಂಚಿದ ‘ನಂದಿನಿ’ ಲೋಗೋ

ಸಮಗ್ರ ನ್ಯೂಸ್: ಮುಂದಿನ ತಿಂಗಳಿನಿಂದ ನಡೆಯಲಿರುವ ಟಿ-20 ಕ್ರಿಕೆಟ್ (T-20 World Cup) ವಿಶ್ವಕಪ್‌ಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇದರ ಪ್ರಾಯೋಜಕತ್ವ ನೀಡಿರುವ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಲೋಗೋ ಇರುವ ಜೆರ್ಸಿಯನ್ನು ಸ್ಕಾಟ್ಲೆಂಟ್ ತಂಡ ಅನಾವರಣಗೊಳಿಸಿದೆ.

Ad Widget ... ..

ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ಜೂ. 2ರಿಂದ ವೆಸ್ಟ್‌ಇಂಡೀಸ್, ಅಮೆರಿಕದಲ್ಲಿ ನಡೆಯಲಿದೆ. ಸ್ಕಾಟ್ಲೆಂಡ್ ಪುರುಷರ ಪ್ಲೇಯಿಂಗ್ ಶರ್ಟ್‌ಗಳ ಎಡ ತೋಳಿನ ಮೇಲೆ ನಂದಿನಿ ಲೋಗೋ ಇರುತ್ತದೆ. ಲೋಗೋದಲ್ಲಿ ‘ನಂದಿನಿ’ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲಾಗಿದೆ.

Ad Widget

ನಂದಿನಿ ಬ್ರ್ಯಾಂಡ್‌ನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ. ಟಿ-20 ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ. ಪ್ರತಿ ತಂಡಕ್ಕೆ ಪ್ರಾಯೋಜಕತ್ವದ ಮೊತ್ತ ಸುಮಾರು 2.5 ಕೋಟಿ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *