Ad Widget .

ಪುತ್ತೂರು: ಜಾಹೀರಾತು ಹೋರ್ಡಿಂಗ್ಸ್ ತೆರವಿಗೆ ಕ್ರಮ – ಎಸಿ

ಸಮಗ್ರ ನ್ಯೂಸ್: ಮುಂಬೈನಲ್ಲಿ ಇತ್ತೀಚೆಗೆ ಬಂದ ಬಿರುಗಾಳಿಗೆ ಭಾರೀ ದೊಡ್ಡ ಗಾತ್ರದ ಜಾಹಿರಾತು ಫಲಕ ಪೆಟ್ರೋಲ್ ಪಂಪ್ ಮೇಲೆ ಬಿದ್ದು 14ಕ್ಕೂ ಅಧಿಕ ಮಂದಿ ಸಾವನಪ್ಪಿದ್ದರು. ಈ ಪ್ರಕರಣದ ಬೆನ್ನಲ್ಲೇ ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಅಪಾಯಕಾರಿಯಾಗಿರುವ ಜಾಹಿರಾತು ಫಲಕಗಳನ್ನು ತೆಗೆಯಲು ಮುಂದಾಗಿದ್ದಾರೆ.

Ad Widget . Ad Widget .

ಈ ಬಗ್ಗೆ ಮಾಹಿತಿ ನೀಡಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಜಿಲ್ಲಾಧಿಕಾರಿಯವರು ಈಗಾಗಲೇ ಎಲ್ಲಾ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಉಪವಿಭಾಗದ ಕಡೆಯಿಂದ ನಾವು ಕೂಡ ಅಪಾಯಕಾರಿ ಜಾಹೀರಾತು ಫಲಕ ಮತ್ತು ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಒಂದು ವಾರದ ಗಡು ನೀಡಲಾಗಿದೆ ಎಂದರು.

Ad Widget . Ad Widget .

ಇನ್ನು ಮಳೆಗಾಲದ ಮೊದಲು ರಾಜ ಕಾಲುವೆಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಉಪ ವಿಭಾಗದ ಎಲ್ಲಾ ಸೇತುವೆ,ರಾಜ ಕಾಲುವೆ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ.

Leave a Comment

Your email address will not be published. Required fields are marked *