ಪ್ರಜ್ವಲ್ ರೇವಣ್ಣ ಪ್ರಕರಣ/ ಎಕ್ಸ್ ನಲ್ಲಿ ಬ್ಲ್ಯೂ ಟಿಕ್ ಮಾನ್ಯತೆ ಕಳೆದುಕೊಂಡ ಪ್ರಜ್ವಲ್

ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ‘ಎಕ್ಸ್’ ನಿಂದ ಗೇಟ್ ಪಾಸ್ ನೀಡಲಾಗಿದ್ದು, ಅವರ ಬ್ಯೂ ಟಿಕ್ ಮಾನ್ಯತೆ ಈಗ ಅಮಾನ್ಯಗೊಂಡಿದೆ. ಈ ಮೂಲಕ ವೇರಿಫೈಡ್ ಅಕೌಂಟ್ ಸ್ಟೇಟಸ್‍ನಿಂದ ಪ್ರಜ್ವಲ್ ಹೊರಬಿದ್ದಿದ್ದಾರೆ.

Ad Widget ... ..

ಮೊದಲು ಎಕ್ಸ್ ನ ಅಫೀಶಿಯಲ್ ಖಾತೆದಾರರಿಗೆ ಬ್ಯೂಟಿಕ್ ಅನ್ನು ನೀಡಲಾಗುತ್ತಿತ್ತು. ಆದರೆ, ಎಲಾನ್ ಮಸ್ಕ್ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಹಲವು ಬದಲಾವಣೆಯನ್ನು ತಂದರು. ಬ್ಲ್ಯೂ ಟಿಕ್ ಬೇಕೆಂದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವನ್ನು ಸಹ ತರಲಾಗಿದೆ. ಈಗ ಹಣ ಪಾವತಿ ಮಾಡಿಲ್ಲವೆಂದಾದರೆ ಅಥವಾ ಆ ಖಾತೆ ಬಗ್ಗೆ ದೂರುಗಳು ಬಂದರೆ ಬ್ಯೂಟಿಕ್ ಅನ್ನು ವಾಪಸ್ ಪಡೆಯುವ ಅಧಿಕಾರವನ್ನು ಎಕ್ಸ್ ಹೊಂದಿದೆ. ಹೀಗಾಗಿ ಇಲ್ಲಿ ಪ್ರಜ್ವಲ್ ರೇವಣ್ಣ ಅವರಿಗಿದ್ದ ಬ್ಯೂಟಿಕ್ ಮಾನ್ಯತೆ ಈಗ ಅಮಾನ್ಯಗೊಂಡಿದೆ.

Ad Widget

Leave a Comment

Your email address will not be published. Required fields are marked *