Ad Widget .

ಕೇರಳ ರಾಜ್ಯದಲ್ಲಿ ಚಂಡಮಾರುತದ ಸಾಧ್ಯತೆ/ ಕರಾವಳಿಯಲ್ಲಿ ಬೀಸಲಿದೆ ಸುಂಟರಗಾಳಿ

ಸಮಗ್ರ ನ್ಯೂಸ್: ಕೇರಳ ರಾಜ್ಯಕ್ಕೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ಮೇ 19ರ ತನಕ ಕಾಸರಗೋಡು ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ವಿವಿಧ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.

Ad Widget . Ad Widget .

ಮೇ 116ರಿಂದ 19ರ ವರೆಗಿನ ಅವಯಲ್ಲಿ ಎಲ್ಲಾ ದಿನಗಳಲ್ಲಿ ಅಥವಾ ಯಾವುದೇ ದಿನಗಳಲ್ಲಿ ಮಳೆ ಸುರಿಯಬಹುದೆಂದು ಇಲಾಖೆಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Ad Widget . Ad Widget .

ಚಂಡಮಾರುತದ ಹಿನ್ನೆಲೆಯಲ್ಲಿ ಕಾಸರಗೋಡು ಸೇರಿದಂತೆ ಕೇರಳದ ಸಮುದ್ರ ಕರಾವಳಿಯಲ್ಲಿ ಸುಂಟರಗಾಳಿ ಬೀಸುವ ಸೂಚನೆಯಿದೆ. ಆದ್ದರಿಂದ ಕರಾವಳಿ ನಿವಾಸಿಗಳು, ಸಾರ್ವಜನಿಕರು ಹಾಗೂ ಪ್ರವಾಸಿಗರು ಗರಿಷ್ಠ ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆಯು ವಿನಂತಿಸಿದೆ. ಜೊತೆಗೆ ಪ್ರಬಲವಾದ ಮಿಂಚು, ಗುಡುಗು ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಅತೀವ ಜಾಗರೂಕತೆಯಿಂದ ಇರುವಂತೆ ತಿಳಿಸಲಾಗಿದೆ.

Leave a Comment

Your email address will not be published. Required fields are marked *