Ad Widget .

ಸಾಲ ತೀರಿಸಲು ಮನೆ ಓನರ್ ಗೇ ಮುಹೂರ್ತ ಇಟ್ಟ ಯುವತಿ

ಸಮಗ್ರ ನ್ಯೂಸ್: ಸಾಲ ತೀರಿಸಲು ಮನೆ ಓನರ್ ಅನ್ನೆ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜೊತೆ ಮಜಾ ಮಾಡಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ ಮಾಡಿದ್ದಾಳೆ.

Ad Widget . Ad Widget .

ದಿವ್ಯಾ ಕೊಲೆಯಾದ ಮಹಿಳೆ. ಮೋನಿಕಾ (24) ಬಂಧಿತ ಆರೋಪಿ. ಶೋಕಿಗಾಗಿ ಮನೆ ಮಾಲಕಿಯನ್ನೆ ಹತ್ಯೆ ಮಾಡಿದ ದಿವ್ಯಾಳನ್ನು ಪೊಲೀಸರು ಬಂಧಿಸಿದರು. ಈ ಮೋನಿಕಾ ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು. ಮೂಲತಃ ಕೋಲಾರ ಜಿಲ್ಲೆಯ ಮೋನಿಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಪ್ರಿಯಕರನನ್ನು ಗಂಡ ಎಂದು ಹೇಳಿ ಬಾಡಿಗೆಗೆ ಮನೆ ಗಿಟ್ಟಿಸಿದ್ದಳು. ಆದರೆ ಒಬ್ಬಳೇ ವಾಸವಿದ್ದು, ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ.

Ad Widget . Ad Widget .

ಮೋನಿಕಾ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳಲ್ಲದೆ, ಜೊತೆಗೆ ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಿಕೊಡಲು ಹಣಕ್ಕಾಗಿ ಹುಡುಕಾಡುತ್ತಿದ್ದಳು. ಅಷ್ಟರಲ್ಲಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಆಕೆಯ ಕಣ್ಣು ಬಿದ್ದಿತ್ತು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ನಡೆಸುತ್ತಿದ್ದರು. ದಿವ್ಯಾ ಅತ್ತೆ ಮಾವ ಸಹ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇರುತ್ತಿದ್ದರು. ಇದನ್ನು ಗಮನಿಸಿ ಸ್ಕೆಚ್‌ ಹಾಕಿದ ಮೋನಿಕಾ, ಯಾರೂ ಇಲ್ಲದ ಸಮಯ ನೋಡಿ ಹಿಂಬದಿಯಿಂದ ಬಂದು ದಿವ್ಯಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *