ವಿಮಾನ ಹತ್ತದೆ ವಿದೇಶದಲ್ಲೆ ಉಳಿದುಕೊಂಡ ಪ್ರಜ್ವಲ್: ಎಸ್ಐಟಿ ಗರಂ

ಸಮಗ್ರ ನ್ಯೂಸ್: ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿ ಮೋಸ್ಟ್ ವಾಂಟೆಡ್‌ ಲಿಸ್ಟ್‌ನಲ್ಲಿರುವ ಸಂಸದ ಪ್ರಜ್ವಲ್‌ ರೇವಣ್ಣ, ಇಂದು ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸುತ್ತಾರೆ ಎನ್ನುವ ಸುದ್ದಿ ಇತ್ತು. ಇದಕ್ಕೆ ಮೂಲವಾಗಿ ಪಜ್ವಲ್​ ಫ್ಲೈಟ್​ ಟಿಕೆಟ್​ ಸಹ ಬುಕ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್​ಗಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ. ಆದ್ರೆ, ಪ್ರಜ್ವಲ್ ರೇವಣ್ಣ, 3.35 ಕ್ಕೆ ಟೇಕ್ ಆಫ್ ಆಗುವ ಫ್ಲೈಟ್ ನಲ್ಲಿ ಹತ್ತಿಯೆ ಇಲ್ಲ.

Ad Widget ... ..

ಬ್ಯುಸಿನೆಸ್ ಕ್ಲಾಸ್ ಕ್ಯಾಟಗರಿ 6ಜಿ ಸೀಟ್ ಬುಕ್ ಮಾಡಿದರು. ಮ್ಯೂನಿಕ್ ನಿಂದ ಫ್ಲೈಟ್ ಟೇಕ್ ಆಫ್ ಆಯ್ತು ಆದ್ರೆ ಪ್ರಜ್ವಲ್ ಹತ್ತಿಲ್ಲ. ಸುಮಾರು 3 ಲಕ್ಷ ಮೌಲ್ಯದ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ಭಾರತಕ್ಕೆ ಬರಲೇ ಇಲ್ಲ. ಇತ್ತ ಪ್ರಜ್ವಲ್ ಕಳ್ಳಾಟಕ್ಕೆ ಎಸ್ಐಟಿ ಗರಂ ಆಗಿದೆ. ಕಾನೂನಿಗೆ ಡೊಂಟ್ ಕೇರ್ ಅನ್ನೋ ಅನುಮಾನ ಹುಟ್ಟಿದೆ. ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಎಸ್ಐಟಿಗೆ ಪ್ರಜ್ವಲ್ ಚಳ್ಳೆಹಣ್ಣು ತಿನಿಸುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *