ಬೀದರ್ : ಬಸ್‌ ನಲ್ಲಿ ಮಹಿಳೆಯರ ಹೊಡೆದಾಟ

ಸಮಗ್ರ ನ್ಯೂಸ್ : ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ಘಟನೆ ಬೀದರ್ನಿಂದ ಕಲಬುರಗಿ ಬಸ್ನಲ್ಲಿ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದ ಬಳಿಕ ಮಹಿಳೆಯರು ಕಿತ್ತಾಟ ನಡೆಸಿದ್ದಾರೆ.

Ad Widget ... ..

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಮಹಿಳೆ, “ಸೀಟು ಬಿಡು, ಇದು ನನ್ನದು” ಎಂದು ಹೇಳಿದ್ದರೆ ಮತ್ತೊಬ್ಬಳು, “ನಾನು ಸೀಟ್ ಬಿಡಲ್ಲ. ಏನ್ ಮಾಡ್ತಿ” ಎಂದು ಪ್ರಶ್ನಿಸಿದ್ದಾಳೆ.

Ad Widget

ಇಬ್ಬರು ಪರಸ್ಪರ ಮಾತಿನಲ್ಲಿ ಜಗಳ ಮಾಡುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಓರ್ವ ಮಹಿಳೆ ತನ್ನ ಚಪ್ಪಲಿ ತೆಗೆದು ಜಗಳ ಮಾಡುತ್ತಿದ್ದ ಮಹಿಳೆ ಹೊಡೆದಿದ್ದಾಳೆ. ಚಪ್ಪಲಿ ಹಲ್ಲೆ ಬಳಿಕ ಮೈಮೇಲೆ ಹಾಕಿದ ಬಟ್ಟೆ ಹಿಡಿದು ಮಹಿಳೆಯರು ಎಳೆದಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *