Ad Widget .

ಎಚ್.ಡಿ ರೇವಣ್ಣ ರಿಲೀಸ್ ಬಳಿಕ ಮೊದಲ ಪ್ರತಿಕ್ರಿಯೆ| ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ

ಸಮಗ್ರ ನ್ಯೂಸ್: ಕೆ.ಆರ್.‌ ನಗರದ ಕಿಡ್ನ್ಯಾಪ್ ಆರೋಪದಡಿ ಜೈಲು ಸೇರಿದ ಎಚ್.ಡಿ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಿದ ನಂತರ ರೇವಣ್ಣ ಪದ್ಮನಾಭನಗರದಲ್ಲಿರುವ ಎಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬಸ್ಥರ ನೋಡಿದಂತೆ ರೇವಣ್ಣ ಗಳಗಳನ್ನೆ ಕಣ್ಣೀರಿಟ್ಟಿದ್ದಾರೆ.

Ad Widget . Ad Widget .

ಇನ್ನೂ ರೇವಣ್ಣ ಅವರು ಬಿಡುಗಡೆ ಬಳಿಕ ಟೆಂಪಲ್ ರನ್ ಮಾಡಿದ್ದಾರೆ. ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ದೇವರಲ್ಲಿ ಅದನ್ನೇ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಾನು ಹೆಚ್ಚಿಗೆ ಏನು ಮಾತನಾಡಲ್ಲ. ಕಳೆದ 11 ದಿನಗಳಿಂದ ನ್ಯಾಯಾಲಯದ ಕಾನೂನನ್ನು ಪಾಲಿಸಿದೇನೆ. ಈ ಆಪಾದನೆಯಿಂದ ಹೊರಗೆ ಬರುತ್ತೇನೆ ಎಂಬ ನಂಬಿಕೆ ಇದೆ ಎಂದು ಹೇಳಿದರು

Ad Widget . Ad Widget .

Leave a Comment

Your email address will not be published. Required fields are marked *