ರಾಮಾಯಣ ಚಲನಚಿತ್ರಕ್ಕೆ 835 ಕೋಟಿ ರು. ವೆಚ್ಚ/ 2027ರ ವೇಳೆಗೆ ತೆರೆಗೆ

ಸಮಗ್ರ ನ್ಯೂಸ್: ಬಾಲಿವುಡ್‍ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ, ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿರುವ ಹಿಂದಿಯ ಹೊಸ ಚಲನಚಿತ್ರ ರಾಮಾಯಣವನ್ನು ಭರ್ಜರಿ 835 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಈ ಮೂಲಕ ಇದು ಈವರೆಗೆ ಭಾರತದಲ್ಲಿ ಅತಿ ಹೆಚ್ಚು ಬಜೆಟ್‍ನ ಸಿನೆಮಾ ಎಂಬ ದಾಖಲೆಗೆ ಪಾತ್ರವಾಗಲಿದೆ ಎಂದು ವರದಿಗಳು ಹೇಳಿವೆ.

Ad Widget ... ..

ಸಿನಿಮಾದ ಪೋಸ್ಟ್ ಪ್ರೊಡಕ್ಷನ್‍ಗೆ ಬರೋಬ್ಬರಿ 600 ದಿನಗಳು ಬೇಕಾಗಲಿದ್ದು, ಸಿನಿಮಾ 2027ರ ವೇಳೆಗೆ ತೆರೆಗೆ ಬರುವ ನಿರೀಕ್ಷೆಯಿದೆ.

Ad Widget

ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಮತ್ತು ಸಾಯಿ ಪಲ್ಲವಿಯ ಫಸ್ಟ್ ಲುಕ್ ಕೂಡ ರಿವೀಲ್ ಆಗಿತ್ತು. ಈ ಸಿನಿಮಾದಲ್ಲಿ ರಣಬೀರ್, ಸಾಯಿಪಲ್ಲವಿ, ಲಾರಾ ದತ್ತ, ಸನ್ನಿ ಡಿಯೋಲ್ ಸೇರಿದಂತೆ ಬಹು ತಾರಾಂಗಣವಿದೆ.

Leave a Comment

Your email address will not be published. Required fields are marked *