ರಾಯಚೂರು: ಎಣ್ಣೆ ಸಾಲ ಕೊಡದಿದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ; ಆರೋಪಿ ವಶಕ್ಕೆ

ಸಮಗ್ರ ನ್ಯೂಸ್: ಮದ್ಯದಂಗಡಿಯಲ್ಲಿ ಎಣ್ಣೆ ಸಾಲ ಕೊಡದಿದಕ್ಕೆ ಬಾರ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

Ad Widget ... ..

ಬಾರ್ ಶಾಪ್ ಮಾಲೀಕ ಮಲ್ಲಿಕಾರ್ಜುನಗೌಡರ ಮೇಲೆ ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.

Ad Widget

ಹಲ್ಲೆ ದೃಶ್ಯಗಳು ಬಾರ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪದೇ ಪದೇ ಬಾರ್ ಶಾಪ್ನಲ್ಲಿ ಸಾಲ ಕೇಳುತ್ತಿದ್ದ ಆರೋಪಿ ಚಾಂದ್ಗೆ ಮದ್ಯದಂಗಡಿ ಮಾಲೀಕ ಸಾಲ ಕೊಡಲ್ಲ ಎಂದಿದ್ದಕ್ಕೆ ಕಿರಿಕ್ ಮಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿರೋ ಮಲ್ಲಿಕಾರ್ಜುನಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಚಾಂದ್ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *