Ad Widget .

ಮುಂಗಾರು ಮಳೆ/ ಮೇ 19ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಎಂಟ್ರಿ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯ ಆಗ್ನೆಯ ಭಾಗಕ್ಕೆ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಮೇ 19ರಂದು ಮುಂಗಾರು ಮಳೆ ಎಂಟ್ರಿಕೊಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂನ್ಸೂಚನೆ ಕೊಟ್ಟಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಬರುವ ಮಾರುತಗಳು ಏಳೆಂಟು ದಿನಗಳ ಬಳಿಕ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಲಿವೆ. ನಂತರ, ಕೇರಳಕ್ಕೆ ಆಗಮಿಸಿರುವ ಮಾರುತಗಳು ಪ್ರಬಲವಾಗೊಂಡರೆ ಅದೇ ದಿನ ಕರ್ನಾಟಕದ ಕರಾವಳಿ ಭಾಗಗಕ್ಕೆ ಕಾಲಿಡಲಿದೆ. ಮಾರುತಗಳು ಪ್ರಬಲಗೊಂಡರೆ ವಾಡಿಕೆಗಿಂತ ಮುನ್ನ ಅಥವಾ ವಾಡಿಕೆಯಂತೆ ರಾಜ್ಯಕ್ಕೆ ಮಾರುತಗಳು ಆಗಮಿಸಲಿವೆ.

Ad Widget . Ad Widget . Ad Widget .

ಕಳೆದ ವರ್ಷ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ‘ಬಿಪಜೋರ್ಯ್’ ಚಂಡಮಾರುತದಿಂದ ಒಂದು ವಾರ ತಡವಾಗಿ ಮಾರುತಗಳು ರಾಜ್ಯಕ್ಕೆ ಆಗಮಿಸಿತ್ತು. ಇದರಿಂದಾಗಿ ಮುಂಗಾರಿನ ಮೇಲೆ ಪರಿಣಾಮ ಬೀರಿತ್ತು.

ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಬೆಂ. ಗ್ರಾಮಾಂತರ ಹೆಸರುಟ್ಟ, ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ, ಮಾಧವಾರ, ಚಾಮರಾಜನಗರದ ಹರದನಹಳ್ಳಿ, ಚಿಕ್ಕಬಳ್ಳಾಪುರ ಸಿಟಿ, ಚಿಕ್ಕಮಗಳೂರಿನ ಮೂಡಗೆರೆ, ಚಿತ್ರದುರ್ಗದ ಹಿರಿಯೂರು, ದಕ್ಷಿಣ ಕನ್ನಡದ ಮಂಗಳೂರು, ದಾವಣಗೆರೆ ಸಿಟಿ, ಕೋಲಾರದ ಟಮಕಾ, ಕೊಪ್ಪಳದ ಗಂಗಾವತಿ, ಮಂಡ್ಯ, ರಾಮನಗರ, ಶಿವಮೊಗದ ಆಗುಂಬೆ, ತುಮಕೂರಿನ ಚಿಕ್ಕನಾಯಕಹಳ್ಳಿ ಹಾಗೂ ಯಾದಗಿರಿ ಸೇರಿ ಕೆಲವೆಡೆ ಸೋಮವಾರ ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 14ರಿಂದ ಮೇ 17ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

Leave a Comment

Your email address will not be published. Required fields are marked *