ಸಮಗ್ರ ನ್ಯೂಸ್: ಮುಂಬೈನ ಘಾಟ್ಕೋಪರ್ನಲ್ಲಿ ಧೂಳು ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಫಲಕ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಜೊತೆಗೆ 59 ಜನರು ಗಾಯಗೊಂಡಿದ್ದಾರೆ. ಎನ್ಡಿಆರ್ಎಫ್ ಒಂದು ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸುತ್ತಿದೆ. ಇದರಂತೆ ಧೂಳು ಗಾಳಿಗೆ ಅನೇಕ ಕಡೆಗಳಲ್ಲಿ ಅನಾಹುತಗಳು ಸಂಭವಿಸಿವೆ.
ವಡಾಲಾದಲ್ಲಿ ಅಟ್ಟಣಿಗೆಯೊಂದು ಕುಸಿದಿದೆ. ಸಂಜೆ 4:22 ಕ್ಕೆ, ಶ್ರೀ ಜಿ ಟವರ್ ಬಳಿಯ ಬರ್ಕತ್ ಅಲಿ ನಾಕಾದಲ್ಲಿ ಘಟನೆ ನಡೆದಿದೆ. ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು, ಒಬ್ಬರು ಕಾರಿನೊಳಗೆ ಸಿಲುಕಿಕೊಂಡಿದ್ದಾರೆ. ಮುಂಬೈ ಅಗ್ನಿಶಾಮಕ ದಳ ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಹೋರ್ಡಿಂಗ್ ಬಿದ್ದ ಕಾರಣ ಪೂಜಾ ಜಂಕ್ಷನ್ (ವಡಾಲಾ) ನಾರ್ತ್ ಬೌಂಡ್ ಮತ್ತು ಫ್ರೀವೇ ಟನಲ್ ಟ್ರಾಂಬೆ ಸೌತ್ ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ. ಮುಂಬೈ ಮೆಟ್ರೋದ ಸಂಚಾರಕ್ಕೂ ಸಮಸ್ಯೆಯಾಗಿದೆ. ರೈಲುಗಳು ನಿಗದಿತ ಸಮಯಕ್ಕೆ ತಲುಪಲಿಲ್ಲ ಎಂದು ಹೇಳಿದ್ದರು.