Ad Widget .

ಹೈದರಾಬಾದ್: ಐದು ತಿಂಗಳ ಮಗುವನ್ನು ಕೊಂದು ಹಾಕಿದ ನಾಯಿ

ಸಮಗ್ರ ನ್ಯೂಸ್ : ಐದು ತಿಂಗಳ ಮಗುವನ್ನು ನಾಯಿಯೊಂದು ಕಚ್ಚಿ ಕೊಂದಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.

Ad Widget . Ad Widget .

ಬಾಬುಸಾಯಿ ಎಂಬ ಮಗುವನ್ನು ಪೋಷಕರು ಕೆಲಸಕ್ಕೆ ಹೋಗುವ ವೇಳೆ ಮನೆಯಲ್ಲಿ ಮಲಗಿಸಿದ್ದರು. ಯಾರ ಗಮನಕ್ಕೂ ಬಾರದಂತೆ ಒಳ ಪ್ರವೇಶಿಸಿದ ನಾಯಿ ದಾಳಿ ಮಾಡಿ ಕೊಲೆ ಮಾಡಿದೆ. ಮಗುವಿನ ತಂದೆ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಈ ಆಘಾತಕಾರಿ ಘಟನೆಯು ದೇಶದಲ್ಲಿ ನಾಯಿ ಕಡಿತ ಮತ್ತು ನಾಯಿ ದಾಳಿಯ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದಿದೆ. 2022 ರಿಂದ 2023 ರವರೆಗೆ ನಾಯಿ ಕಡಿತದ ಘಟನೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 26.5 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಡಿಸೆಂಬರ್ನಲ್ಲಿ ವರದಿ ಮಾಡಿದೆ.

ಕಳೆದ ತಿಂಗಳು ಬೀದಿ ನಾಯಿಗಳ ದಾಳಿಯಲ್ಲಿ ಕನಿಷ್ಠ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಏಪ್ರಿಲ್ 14 ರಂದು ಹೈದರಾಬಾದ್ನ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕಿಯನ್ನು ಬೀದಿ ನಾಯಿಗಳು ಕಚ್ಚಿ ಕೊಂದಿದ್ದವು. ಮತ್ತೊಂದು ದುರಂತ ಘಟನೆಯಲ್ಲಿ, ಏಪ್ರಿಲ್ 13 ರಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ ನಾಲ್ಕು ವರ್ಷದ ಬಾಲಕಿಯನ್ನು ಕೊಂದಿದ್ದವು.

ಈ ಘಟನೆಯ ಹಿನ್ನೆಲೆಯಲ್ಲಿ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸಾಕುಪ್ರಾಣಿಗಳಿಗೆ ವಿಶೇಷವಾಗಿ ನಾಯಿಗಳಿಗೆ ಸಾರ್ವಜನಿಕ ಉದ್ಯಾನವನಗಳ ಒಳಗೆ ಪ್ರವೇಶ ನಿರ್ಬಂಧಿಸಿದೆ. ಪರಿಷ್ಕೃತ ನಿಯಮಗಳ ಪ್ರಕಾರ ಸಾಕುಪ್ರಾಣಿಗಳನ್ನು ಉದ್ಯಾನವನಗಳ ಒಳಗೆ ಬಿಗಿಯಾಗಿ ಕಟ್ಟುವುದು ಮತ್ತು ಬಾಯಿ ಮುಚ್ಚಿಸುವುದು ಕಡ್ಡಾಯ.

ನಾಯಿಗಳ ದಾಳಿಯು ಕೆಲವು ತಳಿಗಳ ನಾಯಿಗಳನ್ನು ವಸತಿ ಪ್ರದೇಶಗಳಲ್ಲಿ ಸಾಕಬಹುದೇ ಎಂಬ ಚರ್ಚೆ ಹುಟ್ಟು ಹಾಕಲು ಕಾರಣವಾಗಿದೆ. ಪಿಟ್ಬುಲ್ ಟೆರಿಯರ್, ಅಮೆರಿಕನ್ ಬುಲ್ಡಾಗ್, ರಾಟ್ವೀಲರ್ ಮತ್ತು ಮಾಸ್ಟಿಫ್ಸ್ ಸೇರಿದಂತೆ 23 ತಳಿಯ ಕ್ರೂರ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರವು ಮಾರ್ಚ್ನಲ್ಲಿ ರಾಜ್ಯಸರ್ಕಾರಗಳನ್ನು ಕೇಳಿದೆ. ಈಗಾಗಲೇ ಈ ತಳಿಗಳನ್ನು ಸಾಕುಪ್ರಾಣಿಗಳಾಗಿ ಹೊಂದಿರುವವರು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎಂದು ನಿರ್ದೇಶನದಲ್ಲಿ ಸೇರಿಸಲಾಗಿದೆ.

Leave a Comment

Your email address will not be published. Required fields are marked *