Ad Widget .

ಪ್ರಧಾನಿ ನರೇಂದ್ರ ಮೋದಿಯಿಂದ ಬಾಗಲಕೋಟೆ ಯುವತಿಗೆ ಪತ್ರ

ಸಮಗ್ರ ನ್ಯೂಸ್: ಇತ್ತೀಚೆಗೆ ಕರುನಾಡಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಅದೇ ಸಂದರ್ಭದಲ್ಲಿ ಪ್ರಚಾರದ ರ್ಯಾಲಿ ನಡೆಯುತ್ತಿತ್ತು. ಆಗ
ಪ್ರಧಾನಿ ನರೇಂದ್ರ ಮೋದಿ ಮತ್ತು ತಾಯಿಯ ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಇದೀಗ ಮೋದಿ ಪತ್ರ ಬರೆದಿದ್ದಾರೆ.

Ad Widget . Ad Widget .

ಏಪ್ರಿಲ್ 29 ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಮೋದಿ ಬಾಗಲಕೋಟೆಗೆ ಆಗಮಿಸಿದ್ದಾಗ ತಾನು ಚಿತ್ರಿಸಿದ ಸ್ಕೆಚ್ ಹಿಡಿದು ಯುವತಿ ವೇದಿಕೆ ಮುಂಭಾಗದಲ್ಲಿ ನಿಂತಿದ್ದಳು. ತಾಯಿಯ ಫೋಟೋ ಫ್ರೆಮ್ ನೋಡಿ ಎಸ್​ಪಿಜಿ ಸಿಬ್ಬಂದಿಗೆ ಹೇಳಿ ಮೋದಿ ತರಿಸಿಕೊಂಡಿದ್ದರು. ಅದರಲ್ಲಿ ನಿನ್ನ ಹೆಸರು ವಿಳಾಸ ಬರೆದು ಕೊಡು ನಾನು ಪತ್ರ ಕಳಿಸುತ್ತೇನೆ ಎಂದು ಮೋದಿ ಹೇಳಿದ್ದರು. ಅದೇ ರೀತಿಯಾಗಿ ಯುವತಿಗೆ ಕೊಟ್ಟ ಮಾತಿನಂತೆ ಮೇ 5 ರಂದು ಪತ್ರ ಬರೆದಿದ್ದು, ಪೋಸ್ಟ್ ಮೂಲಕ ಯುವತಿಗೆ ಪತ್ರ ಬಂದು ತಲುಪಿದೆ.

Ad Widget . Ad Widget .

ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ. ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ. ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಪತ್ರದಲ್ಲಿ ಬರೆಯಲಾಗಿದೆ.

Leave a Comment

Your email address will not be published. Required fields are marked *