ಶಿವಮೊಗ್ಗ : ಜಮೀನು ವಿವಾದ ತಾರಕಕ್ಕೇರಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ

ಸಮಗ್ರ ನ್ಯೂಸ್‌ : ಜಮೀನು ವಿವಾದ ತಾರಕಕ್ಕೇರಿ ಹಾಡಹಗಲೇ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

Ad Widget ... ..

ಸತೀಶ್ ನಾಯ್ಕ (28) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ವಿರುದ್ಧ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

Ad Widget

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಜಮೀನು ವಿವಾದ ಇತ್ತು. ವಿವಾದ ಹಿನ್ನೆಲೆಯಲ್ಲಿ ಯಾರೂ ಕೂಡ ಜಮೀ‌ನಿನೊಳಗೆ ತೆರಳದಂತೆ ಕೋರ್ಟ್ ಆದೇಶ ನೀಡಿತ್ತು. ಇಂದು ಬೆಳಗ್ಗೆ ಜಮೀನಿಗೆ ಸತೀಶ್ ನಾಯ್ಕ ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಗುಂಪು ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದೆ. ಪರಿಣಾಮ ಸತೀಶ್ ನಾಯ್ಕ್ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ರಿಕ್ತಗೊಂಡ ಹಲವರಿಂದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ.

Leave a Comment

Your email address will not be published. Required fields are marked *