Ad Widget .

Health Tips; ಸನ್ ಟ್ಯಾನ್ ಆಗಿದೆಯೇ? ಮನೆಯಲ್ಲೇ ಮಾಡ್ಕೊಳ್ಳಿ ಸರಳ ಪರಿಹಾರ

ಸಮಗ್ರ ನ್ಯೂಸ್: ಸನ್ ಟ್ಯಾನ್ ನಿಭಾಯಿಸಲು ಹಲವು ಫೇಶಿಯಲ್ ಗಳು ಮತ್ತು ಇತರ ಕಾರ್ಯ ವಿಧಾನಗಳು ಇವೆ. ಆದರೆ ಮನೆ ಪರಿಹಾರವನ್ನು ಪಡೆಯುವುದಕ್ಕಿಂತ ಇವು ಉತ್ತಮವಲ್ಲ. ಮನೆ ಪರಿಹಾರಗಳು ಚರ್ಮಕ್ಕೆ ಪೋಷಣೆ ಒದಗಿಸುತ್ತದೆ. ಜೊತೆಗೆ ಆರೋಗ್ಯಕರ ವರ್ಧಕವನ್ನು ನೀಡುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೊಸರು ಮತ್ತು ಟೊಮೆಟೊ ಪ್ಯಾಕ್:
2 ಚಮಚ ಟೊಮೆಟೊ ತಿರುಳು, 1 ಚಮಚ ನಿಂಬೆರಸ ಮತ್ತು 1 ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಪ್ಯಾಕನ್ನು ಮುಖ ಮತ್ತು ಕೈಗಳಿಗೆ ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಬೇಕು.

Ad Widget . Ad Widget . Ad Widget .

ಹಾಲು ಮತ್ತು ಅರಿಶಿಣ:
ಹಾಲಿಗೆ ಚಿಟಿಕೆಯಷ್ಟು ಅರಿಶಿಣ ಹಾಕಿ ಚರ್ಮಕ್ಕೆ ಲೇಪಿಸಿ. ಒಣಗಿದ ನಂತರ ತಣ್ಣೀರಿನಲ್ಲಿ ಸಂಪೂರ್ಣವಾಗಿ ತೊಳೆಯಬೇಕು.

ಪಪ್ಪಾಯ ಮತ್ತು ಜೇನುತುಪ್ಪ:
ಪಪ್ಪಾಯ ತಿರುಳಿಗೆ ಜೇನುತುಪ್ಪ ಸೇರಿಸಿ ರುಬ್ಬಿಕೊಂಡ ನಂತರ ಪೇಸ್ಟನ್ನು ಟ್ಯಾನ್ ಆದ ಜಾಗಕ್ಕೆ ಹಚ್ಚಿ. 20 ನಿಮಿಷಗಳ ಬಳಿಕ ಸ್ವಚ್ಛ ಮಾಡಬೇಕು.

ಬಾದಾಮಿ:
ನೆನೆಸಿ ಸಿಪ್ಪೆ ಸುಲಿದ ಬಾದಾಮಿಯನ್ನು ಹಾಲಿನೊಂದಿಗೆ ರುಬ್ಬಿಕೊಳ್ಳಬೇಕು. ತಯಾರಿಸಿದ ಪೇಸ್ಟನ್ನು ಹಚ್ಚಿ 30 ನಿಮಿಷಗಳ ಬಳಿಕ ತೊಳೆಯಬೇಕು.

ನಿಂಬೆ ರಸ:
ಒಂದು ಬೇಸಿನ್ ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಬೇಕು. ಅದಕ್ಕೆ ನಿಂಬೆ ರಸ ಹಿಂಡಿ ಕೈಗಳನ್ನು ಆ ನೀರಿಗೆ ಅದ್ದಬೇಕು. ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.

ಸೌತೆಕಾಯಿ:
2 ಚಮಚ ಸೌತೆಕಾಯಿ ರಸವನ್ನು 1 ಚಮಚ ನಿಂಬೆ ರಸಕ್ಕೆ ಸೇರಿಸಿ ಚಿಟಿಕೆ ಅರಿಶಿನ ಹಾಕಿ ಪೇಸ್ಟ್ ಮಾಡಿಕೊಳ್ಳ ಬೇಕು. ಟ್ಯಾನ್ ಆದ ಭಾಗಕ್ಕೆ ಪೇಸ್ಟ್ ಅನ್ನು ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಬೇಕು.

Leave a Comment

Your email address will not be published. Required fields are marked *