Ad Widget .

15 ವರ್ಷದ ಬಾಲಕನ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಸಾವು

ಸಮಗ್ರ ನ್ಯೂಸ್: ಒಂದು ಸಣ್ಣ ನಿರ್ಲಕ್ಷ್ಯದಿಂದ 5 ವರ್ಷದ ಮಗುವೊಂದು ಕಾರು ಅಪಘಾತದಲ್ಲಿ ಮೃತ ಪಟ್ಟಿದೆ.. ಆರವ್ ಮೃತ ದುರ್ದೈವಿ. ಈ ಘಟನೆ ಬೆಂಗಳೂರಿನ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯ ರಸ್ತೆಯಲ್ಲಿ ನಡೆದಿದೆ.

Ad Widget . Ad Widget .

ತಂದೆ ಜತೆಗೆ ಕಾರು ವಾಶ್‌ ಮಾಡುವಾಗ 15 ವರ್ಷದ ಬಾಲಕ ಏಕಾಏಕಿ ಎಕ್ಸಿಲೇಟರ್‌ ತುಳಿದಿದ್ದಾನೆ. ಇದರಿಂದ ಕಾರಿನ ಬಳಿ ಆಟವಾಡುತ್ತಿದ್ದ ಮಗುವಿಗೆ ಗುದ್ದಿದೆ. ಘಟನೆಯಲ್ಲಿ ಐದು ವರ್ಷ ಮಗು ಆರವ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಆರವ್ ಸಹೋದರ ಧನರಾಜ್, ತಾಯಿ ಲಲಿತಾಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Ad Widget . Ad Widget .

ಇಂದು ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. ಸದ್ಯ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇನ್ನೂ ಘಟನೆಯಲ್ಲಿ ಮಗುವಿಗೆ ಗುದ್ದಿದ ಕಾರು ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೂ ಗುದ್ದಿದೆ ಎಂದು ತಿಳಿದುಬಂದಿದೆ.

ಅಪಘಾತವಾದಗ ಮಗನನ್ನು ಬಚಾವ್ ಮಾಡಲು ತಂದೆ ಮುಂದಾಗಿದ್ದಾರೆ. ತಾನೇ ಕಾರು ಓಡಿಸಿದ್ದು,ಎಂದು ತಂದೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಪಘಾತವಾದಗ ತಂದೆ ಓಡಿ ಬಂದು ಕಾರು ಹತ್ತಿದ್ದಾರೆ. ಅದೇ ಸಂಧರ್ಭದಲ್ಲಿ ಸ್ಥಳೀಯರು ಬಾಲಕನೆ ಕಾರು ಓಡಿಸಿದ್ದು ಬಾಲಕನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಈ ಅಪಘಾತ ಮಾಡಿರುವ 15 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *