ಕಿಡ್ನ್ಯಾಪ್‌ ಸಂತ್ರಸ್ತೆಯ‌ ಹೇಳಿಕೆ ವೈರಲ್…ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಸಂತ್ರಸ್ತೆ

ಸಮಗ್ರ ನ್ಯೂಸ್: ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ ಎನ್ನಲಾದ ಮೈಸೂರಿನ ಕೆ.ಆರ್.‌ ನಗರದ ಮಹಿಳೆಯೊಬ್ಬರನ್ನು ಕಿಡ್ನ್ಯಾಪ್‌ ಮಾಡಿದ್ದಾರೆಂಬ ದೂರಿನ ಮೇಲೆ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಬಂಧಿತರಾಗಿದ್ದಾರೆ. ಅವರು ಜಾಮೀನು ಸಿಗದೆ ಪರದಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಪಹರಣ ನಡೆದಿದೆ ಎನ್ನಲಾದ ಸಂತ್ರಸ್ತ ಮಹಿಳೆಯ ವಿಡಿಯೊ ವೈರಲ್‌ ಆಗಿದೆ.

Ad Widget ... ..

ಹೌದು ಆಕೆ, ನನ್ನನ್ನು ಯಾರು ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು ತಿಳಿದು ದೂರು ಕೊಟ್ಟಿದ್ದಾನೆ ಎಂಬ ಹೇಳಿಕೆ ನೀಡಿದ್ದಾರೆ. ನಾನು ಸಂಬಂಧಿಸಿಕರ ಮನೆಯಲ್ಲಿದ್ದೇನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
ರೇವಣ್ಣ ಆಗಲಿ, ಪ್ರಜ್ವಲ್ ಆಗಲಿ ಭವಾನಿ ಅಕ್ಕಾ ಆಗಲಿ, ಬಾಬಣ್ಣ ಆಗಲಿ ಯಾರಿಂದಲೂ ತೊಂದರೆ ಆಗಲಿಲ್ಲ ಎಲ್ಲರೂ ಚೆನ್ನಾಗಿ ನೋಡಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಮಾಹಿತಿ ಯಾರಿಗೆ ಕೊಡಬೇಕು ಅವರಿಗೆ ಕೊಟ್ಟಿದೇನೆ. ಮನೆ ಮುಂದೆ ಹೋಗಿ ಯಾರು ಟಾರ್ಚರ್ ಕೊಡಬೇಡಿ. ನನ್ನ ಕುಟುಂಬದವರಿಗಾಗಲಿ, ಗಂಡನಿಗೆ ಆಗಲಿ ತೊಂದರೆ ಆದರೆ ನೀವೆ ಜವಾಬ್ದಾರಿ ಎಂದು ಸಂತ್ರಸ್ತೆ ಹೇಳಿದ್ದಾರೆ.

Ad Widget

Leave a Comment

Your email address will not be published. Required fields are marked *