Ad Widget .

ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಅಮೃತೇಶ್ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಬಿಹಾರ ಮೂಲದವನು ಜಿಗಣಿ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾನೆ

Ad Widget . Ad Widget .

ಅಮೃತೇಶ್ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿದ್ದ. ಒಳ್ಳೆಯ ವಿದ್ಯಾಭ್ಯಾಸಕ್ಕಾಗಿ ಪೋಷಕರು ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಸೇರಿಸಿದ್ರು. ಅಮೃತೇಶ್, R​.V.ಕಾಲೇಜಿನಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಹಾಸ್ಟೆಲ್​ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಅಮೃತೇಶ್ ಎರಡು ವಿಷಯದಲ್ಲಿ ಫೇಲ್​ ಆಗಿದ್ದ. ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ. ಈ ವಿಚಾರ ಪೋಷಕರಿಗೆ ತಿಳಿದರೆ ಬೈತಾರೆ ಎಂಬ ಭಯ ಅಮೃತೇಶನಿಗೆ ಇತ್ತು.

Ad Widget . Ad Widget .

ಲೋಕಸಭಾ ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತೆ ಎಂದು ಹೆದರಿಕೊಂಡಿದ್ದ. ಕಾಲೇಜಿನವರು ಅಪ್ಪನಿಗೆ ಫೋನ್ ಮಾಡ್ತಾರೆ ಅಂತ ತಂದೆ ಫೋನ್​ನಲ್ಲಿದ್ದ ನಂಬರ್​ಗಳನ್ನು ಬ್ಲಾಕ್ ಮಾಡಿದ್ದ. ಈ ವೇಳೆ ಆರನೇ ಸೆಮಿಸ್ಟರ್​ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರ್ತೀನಿ ಎಂದು ಅಮೃತೇಶ್ ತಂದೆ ಹೇಳಿದ್ದರು. ತಂದೆಯ ಜೊತೆ ಕಾಲೇಜಿಗೆ ಹೋದ್ರೆ ಫೇಲ್ ಆದ ವಿಚಾರ ತಿಳಿಯುತ್ತೆ ಅಂತ ಹೆದರಿ ಹತ್ತನೇ ತಾರೀಖಿನಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ನಾಪತ್ತೆ ಬಳಿಕ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದು ನಿನ್ನೆ ಜಿಗಣಿ ಕೆರೆಯಲ್ಲಿ ಮೃತದೇಹ ತೇಲಿಕೊಂಡು ಬಂದಿದೆ. ಮೃತ ದೇಹ ತೇಲುವುದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಸದ್ಯ ಮೃತದೇಹವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *