Ad Widget .

ಅಣ್ಣಿಗೇರಿ: ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ತೇರಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್‌ : ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.

Ad Widget . Ad Widget .

ಬಸವ ಜಯಂತಿ ಹಿನ್ನೆಲೆ ಮಜ್ಜಿಗುಡ್ಡ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು. ಸಂಜೆ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಕೂಡ ನಡೆದಿತ್ತು.

Ad Widget . Ad Widget .

ತೇರು ಎಳೆಯುತ್ತಿದ್ದಂತೆ ಅಲ್ಲಿ ಸೇರಿದ್ದ ಭಕ್ತರು ತೇರಿಗೆ ಉತ್ತುತ್ತಿ ಹಣ್ಣುಗಳನ್ನು ತೂರಲಾರಂಭಿಸಿದರು. ಈ ವೇಳೆ ಬಾಬಾಸಾಬ್ ಮುಕಾಶಿ ಎಂಬಾತ ಉತ್ತುತ್ತಿ ಹಣ್ಣುಗಳನ್ನು ಆರಿಸಿಕೊಳ್ಳಲು ತೇರಿನ ಹತ್ತಿರ ಧಾವಿಸಿದ ವೇಳೆ ತೇರಿನ ಚಕ್ರಕ್ಕೆ ಸಿಲುಕಿದ್ದಾನೆ.

ಇದರಿಂದ ಆತನ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *