Ad Widget .

ಕಡಬ: ಸ್ವಾವಲಂಬಿ ಹೆಜ್ಜೆ ಇರಿಸಿದ್ದ ಎಂಡೋ ಪೀಡಿತ ಯುವಕ ಸಾವು

ಸಮಗ್ರ ನ್ಯೂಸ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಎಂಡೋ ಪೀಡಿತ ಯುವಕ ತನ್ನ ಮೂಗಿನ ಶಸ್ತ್ರಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇಲ್ಲಿನ ಪಲ್ಲತ್ತಡ್ಕ ನಿವಾಸಿ ಭಾಸ್ಕರ ಗೌಡ ಹಾಗೂ ರೇವತಿ ದಂಪತಿಯ ಪುತ್ರ ಮನೋಜ್‌(24) ಮೃತಪಟ್ಟವರು.

Ad Widget . Ad Widget .

ಮನೋಜ್‌ಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ಆಗಾಗ ತೊಂದರೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಏಳು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ ಫಲಕಾರಿಯಾಗಿತ್ತು. ಲವಲವಿಕೆಯಿಂದ ಇದ್ದ ಈತನಿಗೆ ಇತ್ತೀಚೆಗೆ ಮತ್ತೆ ಮೂಗಿನಲ್ಲಿ ದುರ್ಮಾಂಸ ಬೆಳೆದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗುರುವಾರ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅದು ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾರೆ.

Ad Widget . Ad Widget .

ಮನೋಜ್‌ ಕುಟುಂಬ ತೀರ ಬಡತನದಲ್ಲಿದೆ, ತಂದೆ ಕೂಲಿ, ತಾಯಿ ಗೃಹಿಣಿಯಾಗಿದ್ದಾರೆ. ಸಹೋದರಿಗೆ ಮದುವೆಯಾಗಿದೆ, ಮನೋಜ್‌ ಎಂಡೋ ಪೀಡಿತನಾದರೂ ದ್ವಿತೀಯ ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದು, ಸ್ವಾವಲಂಬಿಯಾಗಿ ಬದುಕಬೇಕೆನ್ನುವ ಛಲ ಆತನಲ್ಲಿತ್ತು. ಮನೆಯವರಿಗೆ ಹೊರೆಯಾಗಬಾರದು ಎಂದು ಆಡು ಸಾಕಾಣೆ ಮಾಡುತ್ತಿದ್ದರು. ಅದನ್ನು ಕಡಿಮೆ ಮಾಡಿ ಬಳಿಕ ನಾಟಿ ಕೋಳಿ ಸಾಕಾಣೆ ಪ್ರಾರಂಭಿಸಿದ್ದರು. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಮನೋಜ್‌ ದೀಪದ ಬತ್ತಿ ತಯಾರಿಸುವ ಸ್ವ-ಉದ್ಯೋಗ ಪ್ರಾರಂಭಿಸಿದ್ದರು. ಇದಕ್ಕಾಗಿ ಯಂತ್ರವನ್ನೂ ಸಾಲ ಮಾಡಿ ಖರೀದಿಸಿದ್ದರು.

Leave a Comment

Your email address will not be published. Required fields are marked *