ಧಾರವಾಡ: ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಸಮಗ್ರ ನ್ಯೂಸ್‌ : ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’, ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ ಲಕ್ಷ್ಮಿ ಬಳ್ಳಾರಿ ನೆರವೇರಿಸಿದರು.

Ad Widget ... ..

ಈ ಸಂದರ್ಭದಲ್ಲಿ ಬಸವೇಶ್ವರ ಜಯಂತಿ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಚನಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Ad Widget

ಕಾರ್ಯಕ್ರಮದಲ್ಲಿ, ಬಿ.ಎಚ್.ನಾಗೂರ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಬಿ.ಕರಡೋಣಿ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ಎಮ್.ಎಸ್.ಸಾಳುಂಕೆ, ಜಿಮಖಾನಾದ ಉಪಾಧ್ಯಕ್ಷರಾದ ಡಾ.ವಿ.ಬಿ.ಸಾವಿರಮಠ, ಡಾ.ಜಗದೀಶ್ ಗುಡಗೂರ, ಡಾ. ಆರ್.ಬಿ.ಬೂದಿಹಾಳ್, ಡಾ.ಮುಕುಂದ ಲಮಾಣಿ, ಡಾ.ಎಮ್.ಆರ್.ಹಿರೇಮಠ, ಶಂಕರ ಕುಂಬಿ ಶಿವಾನಂದ ಬಾವಿಕಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು.

Leave a Comment

Your email address will not be published. Required fields are marked *