Ad Widget .

ಚಿತ್ರದುರ್ಗ: ಮದುವೆ ಮನೆಯ ಊಟ ಸೇವಿಸಿ ನೂರಾರು ಮಂದಿಗೆ ವಾಂತಿ, ಭೇದಿ

ಸಮಗ್ರ ನ್ಯೂಸ್‌ : ಮದುವೆ ಮನೆಯಲ್ಲಿ ಊಟ ಮಾಡಿದ ನೂರಾರು ಮಂದಿ ಏಕಾಏಕಿ ಅಸ್ವಸ್ಥಗೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ನಿನ್ನೆ ಬ್ಬಾಳ ಗ್ರಾಮದಲ್ಲಿ ಕಾಲ್ಗೆರೆ ಗ್ರಾಮದ ಸಣ್ಣರುದ್ರಪ್ಪ ಎಂಬುವರ ಮಗಳ ಮದುವೆ ಸಮಾರಂಭ ನಡೆದಿತ್ತು. ಹೆಬ್ಬಾಳು ಮಠದಲ್ಲಿ ಆಯೋಜಿಸಿದ್ದ ಮದುವೆಗೆ ಬಂದಿದ್ದ ಸಂಬಂಧಿಕರು, ನೆಂಟರು, ಸ್ನೇಹಿತರು ಭರ್ಜರಿ ಮದುವೆ ಊಟವನ್ನು ಮಾಡಿದರು.ಮದುವೆ ಊಟ ಮಾಡಿದವರಲ್ಲಿ ಸಂಜೆ ವೇಳೆ ಎಲ್ಲರೂ ವಾಂತಿ, ಭೇದಿ ಜತೆಗೆ ಸುಸ್ತು ಕಾಣಿಸಿಕೊಂಡಿದೆ.

Ad Widget . Ad Widget .

ಅನಾರೋಗ್ಯ ಸಮಸ್ಯೆಗಳಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಏಕಾಏಕಿ ನೂರು ಮಂದಿ ಆಸ್ಪತ್ರೆಗೆ ಸೇರಿದ ಕಾರಣಕ್ಕೆ ಚಿಕಿತ್ಸೆಗಾಗಿ ಪರದಾಡಿದ ಘಟನೆ ನಡೆದಿದೆ. ಮದುವೆ ಊಟದಲ್ಲಿ ಫುಡ್ ಪಾಯಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಅಸ್ವಸ್ಥರಿಗೆ ಭರಮಸಾಗರ, ದಾವಣಗೆರೆ ಸರಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಾಶತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *