ಸಮಗ್ರ ನ್ಯೂಸ್: ಕಿಡ್ನ್ಯಾಪ್ ಕೇಸ್ನಲ್ಲಿ ಜೈಲು ಸೇರಿರುವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೇವಣ್ಣಗೆ ಸರಿಯಾಗಿ ನಿದ್ರೆ ಇಲ್ಲದೆ, ಆಹಾರ ಸೇವಿಸದೆ ಚಿಂತೆಯಿಂದ ಹೈರಾಣಾಗಿ ಹೋಗಿದ್ದಾರೆ. ಇದರ ಮಧ್ಯೆ ಜೈಲರಿರುವ ರೇವಣ್ಣ ಅವರನ್ನು ಇಂದಿನಿಂದ ಮೂರು ದಿನಗಳ ಕಾಲ ಕುಟುಂಬಸ್ಥರಿಗೆ, ಸಂಬಂಧಿಕರಿಗೆ ಭೇಟಿಗೆ ಅವಕಾಶವಿಲ್ಲ. ಆಪ್ತರ ಭೇಟಿಯಿಂದ ತನ್ನ ನೋವನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ ರೇವಣ್ಣ ಅವರಿಗೆ ಇದೀಗ ಸರ್ಕಾರಿ ರಜೆ ಅಡ್ಡಿಯಾಗಿದೆ. ಇಂದಿನಿಂದ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಸೋಮವಾರವೇ ಇನ್ನೂ ರೇವಣ್ಣ ಅವರಿಗೆ ನೆಮ್ಮದಿ ಎನ್ನಬಹುದು.
ರೇವಣ್ಣ ಅವರು ಜಾಮೀನು ನಿರೀಕ್ಷೆಯಲ್ಲಿದ್ದರು ಆದರೆ ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಇದರಿಂದಾಗಿ ಕಂಗಾಲಾಗಿರುವ ಹೆಚ್.ಡಿ.ರೇವಣ್ಣ ಮತ್ತಷ್ಟು ಟೆನ್ಷನ್ಗೆ ಒಳಗಾಗಿದ್ದಾರೆ. ಬೇಲ್ ಸಿಗದ್ದಕ್ಕೆ ರೇವಣ್ಣ ಮತ್ತಷ್ಟು ಮಂಕಾಗಿದ್ದಾರೆ ಎನ್ನಲಾಗಿದೆ. ಹೊಟ್ಟೆ ನೋವಿನಿಂದ ಈ ಹಿಂದೆ ರೇವಣ್ಣ ಬಳಲುತ್ತಿದ್ದರು ಆದರೆ ಇದೀಗ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಅದಕ್ಕಾಗಿ ಅವರ ಮೇಲೆ ಹೆಚ್ಚು ನಿಗಾ ಇಡಲಾಗಿದೆ.
ಇನ್ನೂ ಮುಖ್ಯವಾಗಿ ಈ ಹಿಂದೆ ಪಿಎಸ್ಐ ನೇಮಕಾತಿಯ ಅಕ್ರಮ ಕೇಸ್ನಲ್ಲಿ ಅಮೃತ್ ಪಾಲ್ ಇದ್ದ ಕೊಠಡಿಯಲ್ಲಿಯೇ ರೇವಣ್ಣ ಇದ್ದಾರೆ ಅನ್ನೋ ಮಾಹಿತಿಯು ಇದೆ.