Ad Widget .

ಮೈಸೂರು: “ಜೈಶ್ರೀರಾಮ್” ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್| ಸಂಸದ ಪ್ರತಾಪ್ ಸಿಂಹ ಖಂಡನೆ

ಸಮಗ್ರ ನ್ಯೂಸ್ : ಧರ್ಮ ದಂಗಲ್ ಕಿಡಿ ಮೈಸೂರಿನಲ್ಲಿ ಹೊತ್ತಿಕೊಂಡಿದ್ದು, ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಡಿದ ಜಯತು ಜಯತು ಜೈ ಶ್ರೀರಾಮ ಹಾಡು ಕೋಲಾಹಲ ಸೃಷ್ಟಿಸಿದ್ದು, ಶ್ರೀಹರ್ಷ ಹಾಡಿದ ಈ ಹಾಡಿನಿಂದ ಕಾರ್ಯಕ್ರಮದಲ್ಲಿ ಗಲಾಟೆ ಶುರುವಾಗಿದೆ.

Ad Widget . Ad Widget .

ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಿಂದೂ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ. ಇದರ ಫೋಟೋ ಹಾಗೂ ವಿಡಿಯೋವನ್ನು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಿಂದೂ ವಿದ್ಯಾರ್ಥಿಯ ಮೇಲೆ ಹಲ್ಲೆ ಖಂಡಿಸಿದ್ದಾರೆ.

Ad Widget . Ad Widget .

ನಿನ್ನೆ ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಖ್ಯಾತ ಗಾಯಕ ಶ್ರೀಹರ್ಷ ಅವರು “ಜಯತು ಜಯತು ಜೈ ಶ್ರೀರಾಮ್” ಎಂದು ಹಾಡಿದಾಗ ಕಾರ್ಯಕ್ರಮವನ್ನು ಹಾಳುಗೆಡವಿದ್ದಲ್ಲದೆ ಒಬ್ಬ ಹಿಂದೂ ವಿದ್ಯಾರ್ಥಿಯನ್ನು ಥಳಿಸಿದ್ದಾರೆ. ಇದನ್ನೆಲ್ಲಾ ನೋಡಿಯೂ ಕೈಕಟ್ಟಿ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಖ್ಯಾತ ಗಾಯ ಶ್ರೀಹರ್ಷ ಜಯತು ಜಯತು ಜೈಶ್ರೀರಾಮ ಹಾಡು ಹಾಡಿದ್ದಾರೆ. ಈ ಹಾಡಿನಿಂದ ವಿದ್ಯಾರ್ಥಿಗಳ ಗುಂಪು ಕೆರಳಿದೆ. ಕಾರ್ಯಕ್ರಮದ ನಡುವೆ ಗಲಾಟೆ ಶುರುವಾಗಿದೆ. ಜೈಶ್ರೀರಾಮ ಹಾಡಿನಿಂದ ಕಾಲೇಜಿನಲ್ಲಿ ಧರ್ಮದಂಗಲ್ ಕಿಡಿ ಹೊತ್ತಿಕೊಂಡಿದೆ.

ಘಟನೆ ಕುರಿತ ಮೂರು ವಿಡಿಯೋಗಳನ್ನು ಪ್ರತಾಪ್ ಸಿಂಹ ಹಂಚಿಕೊಂಡಿದ್ದಾರೆ. ಘಟನೆ ವಿರುದ್ಧ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

Leave a Comment

Your email address will not be published. Required fields are marked *