Ad Widget .

ಬೆಳಗಾವಿ: ಆಸ್ತಿ ವಿಚಾರವಾಗಿ ಮಾತಿನ ಚಕಮಕಿ| ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್:ಆಸ್ತಿ ವಿಚಾರವಾಗಿ ಅಣ್ಣನ ಮಗನಿಂದ ದಬದಬಹಟ್ಟಿ ಗ್ರಾಮದ ಕೇಶವ ಬೋಸಲೆ ಅವರ ಕೊಲೆ ಮಾಡಿದ ಘಟನೆ ಮೇ. 9ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

Ad Widget . Ad Widget .

ಖಂಡೊಬಾ ಬೋಸಲೆ ಅನ್ನುವ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಹಲವು ವರ್ಷಗಳಿಂದ ಜಮೀನಿನ ಸಲುವಾಗಿ ಚಿಕ್ಕಪ್ಪ ಹಾಗೂ ಯುವಕನ ಜೊತೆ ಜಗಳ ನಡೆಯುತ್ತಲೆ ಇತ್ತು. ಮೇ.9ರಂದು ಇಬ್ಬರು ಕೂಡಿ ಕೊಕಟನೂರ ಹೊರವಲಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *