Ad Widget .

ರಿಸಲ್ಟ್ ಬರುವ ಮೊದಲೇ ಸಂಸದರಾದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ

ಸಮಗ್ರ ನ್ಯೂಸ್: ಮೊನ್ನೆಯಷ್ಟೆ ಎರಡು ಹಂತದ ಲೋಕ ಸಭಾ ಚುನಾವಣೆ ಮುಕ್ತಾಯಗೊಂಡಿದೆ. ಆದರೆ ಆ ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರನ್ನು ಸಂಸದರನ್ನಾಗಿ ಮಾಡಲಾಗಿದೆ.

Ad Widget . Ad Widget .

ಹೌದು ಲಕ್ಷ್ಮಣ ಅವರನ್ನು ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರ ಮಗಳ ಮದುವೆ ಬೀಗರ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಲಕ್ಣ್ಮಣ್ ಅವರನ್ನು ಮೈಸೂರು ಕೊಡಗು ಸಂಸದ ಎಂದು ನಮೂದಿಸಲಾಗಿದೆ. ದಿನಾಂಕ 12/05/2024ರಂದು ಬೀಗರ ಔತಣ ಕೂಟ ಇದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್, ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಅದರಂತೆ ಲಕ್ಷ್ಮಣ್ ಲೋಕಸಭಾ ಸದಸ್ಯರು ಎಂದು ನಮೂದು ಮಾಡಲಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇನ್ನು ಈ ಆಹ್ವಾನ ಪತ್ರಿಕೆ ಎಲ್ಲೆಡೆ ವೈರಲ್ ಆಗಿದೆ.

Ad Widget . Ad Widget .

Leave a Comment

Your email address will not be published. Required fields are marked *