Ad Widget .

ಕಿರುತೆರೆ ನಟಿ ಜ್ಯೋತಿ ರೈಯವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಕನ್ನಡ ಕಿರುತೆರೆಯಲ್ಲಿ ಮಿಂಚಿ ಸುದ್ದಿಯಾಗಿ ಬಳಿಕ ತೆಲುಗು ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಹಾಟ್ ಹಾಟ್ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುವ ನಟಿಯದ್ದು ಎನ್ನಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಲು ಆರಂಭಿಸಿದೆ. ಅವರ ಈ ಫೋಟೋಗಳು ಪಕ್ಕದ ಆಂಧ್ರದಲ್ಲೂ ಸಖತ್‌ ಸದ್ದು ಮಾಡಿವೆ. ತೆಲುಗುವಿನಲ್ಲಿ ಗುಪ್ಪೆದ್ದಂತಾ ಮನಸು ಸೀರಿಯಲ್‌ ಮೂಲಕ ಅವರು ಮನೆಮಾತಾಗಿದ್ದಾರೆ. ಇದರಲ್ಲಿ ನಾಯಕ ರಿಷಿ ಅವರ ತಾಯಿ ಜಗತಿ ಪಾತ್ರದಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಸೀರಿಯಲ್‌ನಲ್ಲಿ ಜಗತಿ ಪಾತ್ರವನ್ನು ಮುಕ್ತಾಯ ಮಾಡಲಾಗಿದೆ. ಇದರ ಬೆನ್ನಲ್ಲುಯೇ ಕೆಲವರು ಜ್ಯೋತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಅವರ ಅಶ್ಲೀಲ ವೀಡಿಯೊಗಳು ಲೀಕ್ ಆಗಿವೆ ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಹೇಳಿದ್ದಾರೆ.

Ad Widget . Ad Widget .

ಇನ್ನು ಈ ವಿಡಿಯೋ ಬಗ್ಗೆ ಜ್ಯೋತಿ ರೈ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸೈಬರ್‌ ಕ್ರೈಮ್‌ಗೆ ಮಾತ್ರ ಈ ವಿಚಾರವಾಗಿ ದೂರು ನೀಡಿದ್ದಾರೆ. ಕೆಲವು ಭಿನ್ನ ವ್ಯಕ್ತಿಗಳು ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ನಂಬರ್‌ಗೆ ಕೆಲ ಮೆಸೇಜ್‌ಗಳು ಕೂಡ ಬಂದಿದ್ದವು ಎಂದು ಜ್ಯೋತಿ ಆರೋಪಿಸಿದ್ದಾರೆ.

twitter.com/EDIT_BY_ABHI ಎನ್ನುವ ಟ್ವಿಟರ್‌ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ ಎಂದು ಪೋಸ್ಟ್‌ ಮಾಡಲಾಗಿದೆ. ಇದೇ ಟ್ವಿಟರ್‌ ಖಾತೆಯಲ್ಲಿ ಜ್ಯೋತಿ ಅವರು ಸೀರೆ ಧರಿಸಿರುವ ಚಿತ್ರದೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿರುವ ಅಥವಾ ತಮ್ಮಲ್ಲಿರುವ ಖಾಸಗಿ ಫೋಟೋಗಳ ಪೈಕಿ ಒಂದನ್ನು ಅಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಪೋಸ್ಟ್‌ ಮಾಡಿರುವ ವ್ಯಕ್ತಿಯ ಉದ್ದೇಶ ಏನು ಎನ್ನುವುದು ಈವರೆಗೂ ಅರ್ಥವಾಗಿಲ್ಲ. ‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈತನ ಉದ್ದೇಶ ಆತನ ಯೂಟ್ಯೂಬ್‌ ಪೇಜ್‌ಗೆ 1 ಸಾವಿರ ಸಬ್‌ಸ್ಕ್ರೈಬರ್ಸ್ ಪಡೆಯುವುದೋ ಅಥವಾ ಆತನಲ್ಲಿ ನಿಜವಾಗಿಯೂ ಜ್ಯೋತಿ ರೈ ಅವರ ವಿಡಿಯೋ ಇದೆಯೇ ಎನ್ನುವುದು ಪ್ರಶ್ನೆಯಾಗಿದೆ. ಪೋಸ್ಟ್‌ ಮಾಡಿರುವ ವ್ಯಕ್ತಿ ತನ್ನ ಬಳಿ ಎರಡು ಫುಲ್‌ ವಿಡಿಯೋಗಳಿದ್ದು, ತಲಾ 5 ನಿಮಿಷದ ವಿಡಿಯೋ ಅದಾಗಿದೆ ಎಂದು ಹೇಳಿದ್ದಾರೆ. ಹಾಗಂತ ಈ ವ್ಯಕ್ತಿ ಇದನ್ನು ಪೋಸ್ಟ್‌ ಮಾಡಿ ಒಂದು ದಿನವಾಗಿದ್ದರೂ ಆತನ ಯೂಟ್ಯೂಬ್‌ಗೆ ಸಬ್‌ಸ್ಕ್ರೈಬರ್ಸ್ 500 ಕೂಡ ದಾಟಿಲ್ಲ. ಹಾಗಾಗಿ ಇದು ಫೇಕ್ ಫೋಟೋಗಳು ಕೂಡ ಆಗಿರಬಹುದು ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *