Ad Widget .

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಸಮಗ್ರ ನ್ಯೂಸ್ : ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ ಎಂದು ಹೇಳಿಕೊಂಡಿದ್ದಾರೆ.

Ad Widget . Ad Widget .

ಪುಷ್ಪ ಸಿನಿಮಾ ಆದ್ಮೇಲೆ ಫಾಹದ್ ಲೈಫ್ ಚೇಂಜ್ ಆಗಿದೆ ಎಂಬ ಅಭಿಪ್ರಾಯ ಬಗ್ಗೆ ಮಾತನಾಡಿದ್ದಾರೆ. ನಟ ಫಾಹದ್ ಫಾಸಿಲ್, ‘‘ಪುಷ್ಪ ಸಿನಿಮಾದಿಂದ ನನಗೇನು ಸಿಕ್ಕಿಲ್ಲ. ನಾನು ಆ ಸಿನಿಮಾನ ಸುಕುಮಾರ್ ಅವರಿಗಾಗಿ ಮಾಡಿದೆ. ನಾನೊಬ್ಬ ನಟ. ಅದರಲ್ಲಿ ನನಗೆ ಖುಷಿ ಇದೆ. ” ಎಂದಿದ್ದಾರೆ.

Ad Widget . Ad Widget .

ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಫಾಹದ್ ಫಾಸಿಲ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಎರಡನೇ ಭಾಗದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಹಾಡಿನಲ್ಲಿ ವಿಭಿನ್ನವಾಗಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಅನೇಕರು ಈ ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಪುಷ್ಪ-1 ಸಕಸ್ಸ್ ಬಳಿಕ ಪುಷ್ಪ-2 ತೆರೆಗೆ ಬರಲು ಬಾಕಿ ಇದೆ. ಈಗಾಗಲೇ ಫ್ಯಾನ್ಸ್ ಈ ಸಿನಿಮಾಗಾಗಿ ಕಾದು ಕುಳಿತ್ತಿದ್ದಾರೆ. ಸಿನಿಮಾ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಇದಕ್ಕಿದೆ. ಪೊಲಾಂಡ್ ಮೂಲದ ಮಿರೋಸ್ಲಾ ಬ್ರೋಜೆಕ್ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಬರುತ್ತಿದೆ.

Leave a Comment

Your email address will not be published. Required fields are marked *