Ad Widget .

ರಿಲಾಕ್ಸ್ ಮೂಡ್ ನಲ್ಲಿ ಸಿಎಂ ಡಿಸಿಎಂ| ರೆಸಾರ್ಟ್ ನಲ್ಲಿ ಡಿಕೆಶಿ, ಊಟಿಯಲ್ಲಿ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಲೋಕ ಚುನಾವಣೆಯ ಮೊದಲ ಹಂತ ಮತ್ತು ಎರಡನೇ ಹಂತ ಎಲೆಕ್ಷನ್ ರಾಜ್ಯದಲ್ಲಿ ಏಪ್ರೀಲ್ 26 ಮತ್ತು ಮೇ 7 ರಂದು ನಡೆದಿದ್ದು ಇದೀಗ ಮುಕ್ತಾಯವಾಗಿದೆ, ಇನ್ನೂ ರಿಸಲ್ಟ್ ಗಷ್ಟೆ ಕಾಯಬೇಕಿದೆ. ಇದೇ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಕರ್ನಾಟಕದಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿದೆ. ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನಿರಂತರವಾಗಿ ಎಲೆಕ್ಷನ್​​ ಸಮಾವೇಶ, ರ್ಯಾಲಿ, ಕ್ಯಾಂಪೇನ್​ಗಳಲ್ಲಿ ಭಾಗಿಯಾಗಿದ್ದರು.

Ad Widget . Ad Widget .

ಕಳೆದ ಎರಡೂ ತಿಂಗಳಿನಿಂದ ರಾಜ್ಯದ ಮೂಲೆ-ಮೂಲೆಗೆ ತೆರಳಿ ತಮ್ಮ ಅಭ್ಯರ್ಥಿಗಳ ಪ್ರಚಾರ ಮಾಡಿದ್ದಾರೆ. ಇದೀಗ ಚುನಾವಣೆ ಮುಗಿಯುತ್ತಿದ್ದಂತೆಯೆ ನಾಯಕರು ವಿಶಾಂತ್ರಿಗೆ ಜಾರಿದ್ದಾರೆ. ಹೌದು..ಡಿಸಿಎಂ ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ರೆಸಾರ್ಟ್​ವೊಂದಕ್ಕೆ ಹೋಗಿದ್ದರೆ, ಸಿದ್ದರಾಮಯ್ಯ ಊಟಿಯತ್ತ ಮುಖ ಮಾಡಿದ್ದಾರೆ.

Ad Widget . Ad Widget .

ಡಿ.ಕೆ ಶಿವಕುಮಾರ್ ಅವರ ಮೇಲೆ ಹಾಸನ ಪೆನ್​ಡ್ರೈವ್​ ಬಿಡುಗಡೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಡಿ.ಕೆ ಶಿವಕುಮಾರ್​ ಮೇಲೆ ಮುಗಿಬಿದ್ದಿದ್ದಾರೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಡಿಕೆಶಿ ಕುಟುಂಬ ಸಮೇತ ರೆಸಾರ್ಟ್​ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರಿನ ಸಾರಾಯ್​ ರೆಸಾರ್ಟ್​ನಲ್ಲೇ ಡಿಕೆಶಿ ಕುಟುಂಬ ವಾಸ್ತವ್ಯ ಹೂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಜತೆ ಸೋದರ ಡಿ.ಕೆ.ಸುರೇಶ್, ಶಾಸಕರಾದ ಡಾ.ರಂಗನಾಥ್, ಇಕ್ಬಾಲ್ ಹುಸೇನ್ ಕೂಡ ರೆಸಾರ್ಟ್​ಗೆ ತಂಗಿದ್ದಾರೆ. ಸೆರಾಯ್ ರೆಸಾರ್ಟ್​ ಡಿ.ಕೆ.ಶಿವಕುಮಾರ್ ಅಳಿಯ ಅಮಾರ್ತ್ಯ ಒಡೆತನದಾಗಿದ್ದು, ಮುಂಜಾಗ್ರತವಾಗಿ ಚಿಕ್ಕಮಗಳೂರು ತಾಲೂಕಿನ ಮೂಕ್ತಿಹಳ್ಳಿ ಬಳಿಯ ಸೆರಾಯ್ ರೆಸಾರ್ಟ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಓರ್ವ DySP, ಇನ್ಸ್​​ಪೆಕ್ಟರ್ ಸೇರಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇತ್ತ ಸಿಎಂ ಸಿದ್ದರಾಮಯ್ಯ ಅವರು ಸಚಿವ ಹೆಚ್​.ಸಿ ಮಹದೇವಪ್ಪ ಜೊತೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ಊಟಿಗೆ ತೆರಳುತ್ತಿದ್ದಾರೆ. ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಬಳಿಕ ಮೈಸೂರಿನಿಂದ ಊಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್​.ಸಿ ಮಹಾದೇವಪ್ಪ ತೆರಳಲಿದ್ದಾರೆ.

Leave a Comment

Your email address will not be published. Required fields are marked *