ಸಮಗ್ರ ನ್ಯೂಸ್: ಮಾಲ್ಡೀವ್ಸ್‌ನಲ್ಲಿದ್ದ 51 ಸೇನಾ ಸಿಬ್ಬಂದಿಗಳನ್ನು ಭಾರತ ವಾಪಸು ಕರೆಯಿಸಿಕೊಂಡಿದೆ. ಮೇ 10ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ನಿಗದಿಪಡಿಸಿದ ಗಡುವಿನಂತೆ ಭಾರತ ಸರ್ಕಾರವು ಎರಡು ತಂಡಗಳಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿತ್ತು.
ಆದಾಗ್ಯೂ, ನಿಖರವಾದ ಅಂಕಿ-ಅಂಶವನ್ನ ಈ ಹಿಂದೆ ಬಹಿರಂಗಪಡಿಸಲಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ರಾಷ್ಟ್ರಪತಿ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್, ಈವರೆಗೆ ಒಟ್ಟು 51 ಭಾರತೀಯ ಸೈನಿಕರನ್ನ ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಮೇ 10 ರೊಳಗೆ ಮಾಲ್ಮೀಲ್ಸ್ ನಿಂದ ದೇಶದ ಎಲ್ಲಾ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗುವುದು. ಪ್ರಸ್ತುತ, ಎರಡು ಪ್ಲಾಟ್ಸಾರ್ಮ್ಗಳಲ್ಲಿ ಬೀಡುಬಿಟ್ಟಿದ್ದ 51 ಸೈನಿಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.