ಸಮಗ್ರ ನ್ಯೂಸ್; ಪೆನ್‌ಡ್ರೈವ್ ಪ್ರಕರಣಕ್ಕೆ ಹಾಗೂ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಕೇಸ್ ಸಂಬಂಧ ಅಡಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಹೊಟ್ಟೆನೋವು ಹಾಗೂ ಎದೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಡಿಸ್ಟಾರ್ಜ್ ಮಾಡಲಾಯಿತು.
ಡಾ. ದಿವ್ಯ ಪ್ರಕಾಶ್ ನೇತೃತ್ವದ ತಂಡ ತಪಾಸಣೆ ನಡೆಸಿ ಸದ್ಯಕ್ಕೆ ರೇವಣ್ಣ ಆರಾಮಾಗಿದ್ದಾರೆ. ಆರೋಗ್ಯ ಸ್ಟೇಬಲ್ ಆಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ಸಂಜೆ ವೇಳೆಗೆ ಎಚ್.ಡಿ. ರೇವಣ್ಣ ಅವರು ಹೊಟ್ಟೆ ನೋವು ಹಾಗೂ ಎದೆ ಉರಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೊದಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿತ್ತು. ಅಲ್ಲಿ ಮೊದಲು ಬಿಪಿ, ಶುಗರ್ ಹಾಗೂ ಇಸಿಜಿ ತಪಾಸಣೆಯನ್ನು ನಡೆಸಲಾಗಿದೆ. ಇವು ನಾರ್ಮಲ್ ಇದ್ದ ಕಾರಣದಿಂದ ಅಲ್ಲಿಂದ ಹೆಚ್ಚಿನ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ.
ಗ್ಯಾಸ್ಟ್ರಿಕ್ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅವರ ಬಳಿ ತಪಾಸಣೆಗೊಳಪಡಿಸಿ ಆರೋಗ್ಯ ಸುಧಾರಿಸಿದೆ ಎಂದು ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ರೇವಣ್ಣ ತೀವ್ರ ಬಳಲಿದಂತೆ ಕಂಡ ಹಿನ್ನೆಲೆಯಲ್ಲಿ ಅವರಿಗೆ ಡ್ರಿಪ್ (ಸಲೈನ್) ಹಾಕಲಾಗಿತ್ತು. ಆದರೆ ಈಗ ಡಿಸ್ಚಾರ್ಜ್ ಮಾಡಲಾಗಿದೆ.
ಮಾಹಿತಿ ಮೇರೆಗೆ ಎಸ್ಐಟಿ ಕಸ್ಟಡಿಯಲ್ಲಿದ ರೇವಣ್ಣ ಸರಿಯಾಗಿ ಊಟ ಮಾಡಿರಲಿಲ್ಲವಂತೆ. ಭಾನುವಾರ ಮನೆ ಊಟ ಮಾಡಿ ನಿನ್ನೆ ಹೋಟೆಲ್ ತಿಂಡಿ, ಊಟಕ್ಕೆ ಮೊಸರು ಹಾಕಿ ಸೇವಿಸಿದರು, ಅವರನ್ನು ಬಂಧಿಸಿದ ದಿನದಿಂದ ಸ್ವಲ್ಪ ಅಷ್ಟೇ ಆಹಾರ ಸೇವನೆ ಮಾಡಿದರಂತೆ. ಅಷ್ಟೇ ಅಲ್ಲದೆ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲವಂತೆ, ಹೀಗಾಗಿ ಆರೋಗ್ಯ ಏರುಪೇರಾಗಿದೆ ಎಂಬ ಮಾಹಿತಿಯು ಇದೆ.