Ad Widget .

ಪಾಕಿಸ್ತಾನ: 13 ವರ್ಷದ ಬಾಲಕಿಯನ್ನು 70ರ ವೃದ್ಧ ಮದುವೆ- ವರ ತಂದೆ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : 13 ವರ್ಷದ ಬಾಲಕಿಯನ್ನು 70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

Ad Widget . Ad Widget .

ದೇಶದ ಪ್ರಸ್ತುತ ಶಾಸನದ ಅಡಿಯಲ್ಲಿ, 1929 ರ ವಿವಾಹ ತಡೆ ಕಾಯಿದೆಯು ಕನಿಷ್ಟ ಮದುವೆಯ ವಯಸ್ಸನ್ನು ಹುಡುಗಿಯರಿಗೆ 16 ಮತ್ತು ಹುಡುಗರಿಗೆ 18 ಎಂದು ವ್ಯಾಖ್ಯಾನಿಸಲಾಗಿದೆ.

Ad Widget . Ad Widget .

ಅಪ್ರಾಪ್ತ ಬಾಲಕಿಯ ತಂದೆ ಆಕೆಯನ್ನು ವೃದ್ಧನಿಗೆ ಮದುವೆ ಮಾಡಿಸಿದ್ದಾನೆ. ಈ ಮಾಹಿತಿಯನ್ನು ಪಡೆದ ಕಾನೂನು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವರ ಮತ್ತು ಬಾಲಕಿ ತಂದೆ ಇಬ್ಬರನ್ನೂ ಬಂಧಿಸಿದ್ದಾರೆ.

ಇದು ಪಾಕಿಸ್ತಾನದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ದೇಶದ ಯುವತಿಯರ ಯೋಗಕ್ಷೇಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Comment

Your email address will not be published. Required fields are marked *