ಸಮಗ್ರ ನ್ಯೂಸ್ : ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯವರೆಗೆ ಶೇ.22.33ರಷ್ಟು ಮತದಾನವಾಗಿದೆ. ಬೆಳಗ್ಗೆ 9 ಗಂಟೆವರೆಗೆ ಶೇ. 8.90ರಷ್ಟು ಮತದಾನವಾಗಿತ್ತು.
ಒಟ್ಟು ಮತದಾರರು: 18,92,962, ಪುರುಷ ಮತದಾರರು :9,71,424, ಮಹಿಳಾ ಮತದಾರರು : 9,21,435, ಮೊದಲ ಬಾರಿ ಮತದಾನ: 42,404. ಕ್ಷೇತ್ರದಲ್ಲಿ ಒಟ್ಟು 2024 ಮತಗಟ್ಟೆಗಳಿವೆ. 2024 ಮತಗಟ್ಟೆಗಳಲ್ಲಿ ಶೌಚಾಲಯ, ಕುಡಿವಯ ನೀರು, ವಿಕಲಚೇತನರಿಗೆ ರೇಲಿಂಗ್, ರ್ಯಾಂಪ್ ನೆರಳಿನ ವ್ಯವಸ್ಥೆ ಮಾಡಲಾಗಿದೆ.
5046 ಬ್ಯಾಲೆಟ್, 2743 ಕಂಟ್ರೋಲ್ ಯುನಿಟ್, 2908 ವಿವಿಪ್ಯಾಟ್ ಗಳ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳು ಮತದಾನ ಕೇಂದ್ರಕ್ಕೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. 1724 ಪಿಆರ್‌ಒ, 1724 ಪಿಒ, 6896 ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಎಸ್ಪಿ ಚನ್ನಬಸವಣ್ಣ ಎಸ್.ಎಲ್ ನೇತೃತ್ಚದಲ್ಲಿ ಬಿಗಿ ಭದ್ರತೆ ಹಮ್ಮಿಕೊಳ್ಳಲಾಗಿದೆ.
ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಸೇರಿ ಸಿವಿಲ್ ಪೊಲೀಸ್ 1141, ಡಿಎಆರ್ 160, KSRP, ಗೃಹ ರಕ್ಷಕ ದಳ ಸಿಬ್ಬಂದಿ, ಅರಣ್ಯ ಸಿಬ್ಬಂದಿಗೆ ಭದ್ರತೆ ನಿಯೋಜನೆ. ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಮೇ 7 ರಾತ್ರಿ 12 ಗಂಟೆವರಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮತದಾನದ ಮುಗಿದ ಬಳಿಕ ಬಿವಿಬಿ ಕಾಲೇಜಿನ ಸ್ಟ್ರಾಂಗ್ ರೂಮ್ ನಲ್ಲಿ ಭದ್ರಗೊಳಿಸಲಾಗುವುದು. ಒಟ್ಟು ೮ ವಿಧಾನಸಭೆ ಕ್ಷೇತ್ರದ ಇವಿಎಮ್ಗಳು ಬೀದರ್ ನಗರದ ಬಿವಿಬಿ ಕಾಲೇಜ್ ಸ್ಟ್ರಾಂಗ್ ರೂಮ್ ನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ.