Ad Widget .

ಬಸ್‌ ಕಂಡಕ್ಟರ್‌ಗಳಿಗೆ ಲೋಹದ ವಿಸಿಲ್‌ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಸಮಗ್ರ ನ್ಯೂಸ್‌ : ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿಯು ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್‌ ಲಿಮಿಟೆಡ್‌ ಬಸ್‌ ಕಂಡಕ್ಟರ್‌ಗಳಿಗೆ 8 ಸಾವಿರ ಲೋಹದ ವಿಸಿಲ್‌ಗ‌ಳನ್ನು ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆಯಾಗಿ ನೀಡಿದೆ.

Ad Widget . Ad Widget .

ಈ ವಿಚಾರವನ್ನು ಚೆನ್ನೈ ತಂಡ ತನ್ನ ಅಧಿಕೃತ ಟ್ವೀಟರ್​ ಎಕ್ಸ್​ ಪೋಸ್ಟ್​ ಮೂಲಕ ತಿಳಿಸಿದೆ. ಪ್ಲಾಸ್ಟಿಕ್‌ ವಿಸಿಲ್‌ಗ‌ಳ ಬಳಕೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ.

Ad Widget . Ad Widget .

ವಿಸಿಲ್‌ ಪೋಡ್​ ಎನ್ನುವುದು ಚೆನ್ನೈ ತಂಡದ ಪ್ರಧಾನ ಸ್ಲೋಗನ್​ ಆಗಿದೆ. ಈ ಸ್ಲೋಗನ್​ಗೆ ತಕ್ಕಂತೆ ಇದೀಗ ಫ್ರಾಂಚೈಸಿ ಬಸ್‌ ಕಂಡಕ್ಟರ್‌ಗಳಿಗೆ ದೀರ್ಘ‌ ಬಾಳಿಕೆಯ ಮೆಟಲ್‌ ವಿಸಿಲ್‌ಗಳನ್ನು ನೀಡಿದೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಈ ಬಾರಿ ಆಡಿರುವ 11 ಪಂದ್ಯಗಳಲ್ಲಿ 6 ಗೆಲುವು 5 ಸೋಲು ಕಂಡು 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಇದರಲ್ಲಿ 2 ಪಂದ್ಯ ಗೆದ್ದರೆ ಪ್ಲೇ ಆಫ್​ ಟಿಕೆಟ್​ ಸಿಗಲಿದೆ. ಮುಂದಿನ ಪಂದ್ಯವನ್ನು ಮೇ 12ರಂದು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ.

Leave a Comment

Your email address will not be published. Required fields are marked *