Ad Widget .

ಇಂದು ದೇಶದಲ್ಲಿ 3ನೇ ಹಂತದ ಲೋಕಸಭಾ ಚುನಾವಣೆ| ಹಲವು ಘಟಾನುಘಟಿಗಳ ಭವಿಷ್ಯ ನಿರ್ಧರಿಸಲಿದ್ದಾನೆ ಮತದಾರ

ಸಮಗ್ರ ನ್ಯೂಸ್: ದೇಶದಲ್ಲಿ ಇಂದು ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದ 14 ಸೇರಿ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Ad Widget . Ad Widget .

ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ.

Ad Widget . Ad Widget .

14 ಕ್ಷೇತ್ರಗಳಲ್ಲಿ ಒಟ್ಟು 2,59,17, 493 ಮತದಾರರಿದ್ದಾರೆ. ಈ ಪೈಕಿ 1,29,48,978 ಪುರುಷರು, 1,29,66,570 ಮಹಿಳೆಯರು ಮತ್ತು 1,945 ಇತರೆ ಮತದಾರರಿದ್ದಾರೆ. ಒಟ್ಟು 35,465 ಸೇವಾ ಮತದಾರರು, 418 ಸಾಗರೋತ್ತರ ಮತದಾರರು, 6,90,929 ಯುವ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 2,29,263 ಮತದಾರರು ಮತ್ತು 3,43,966 ದಿವ್ಯಾಂಗ ಮತದಾರು ಮೂರನೇ ಹಂತದಲ್ಲಿ ಒಳಗೊಂಡಿದ್ದಾರೆ.

ಒಟ್ಟು 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಗುಜರಾತ್‌ನ 26, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಮಧ್ಯಪ್ರದೇಶದ 8, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂನ 4, ಪಶ್ಚಿಮ ಬಂಗಾಳದ 4, ಗೋವಾದ 2, ದಾದ್ರಾ- ನಗರ ಹವೇಲಿ ಮತ್ತು ದಮನ್-ದಿಯುನ 2 ಕ್ಷೇತ್ರಗಳು ಸೇರಿವೆ.

ಕರ್ನಾಟಕದಲ್ಲಿ ಎರಡನೇ ಮತ್ತು ಕೊನೆಯ ಹಂತದ ಮತದಾನ ಇದಾಗಿದೆ. ದೇಶದಲ್ಲಿ ಮೂರನೇ ಹಂತದ ಮತದಾನವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸುಪ್ರಿಯಾ ಸುಳೆ ಮತ್ತು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಸೇರಿದಂತೆ ಪ್ರಮುಖರ ರಾಜಕೀಯ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಮಾಜಿ ಸಂಸದ ಅಕ್ಷಯ್ ಯಾದವ್, ರಾಮ್ ಗೋಪಾಲ್ ಯಾದವ್ ಅವರ ಪುತ್ರ ಆದಿತ್ಯ ಯಾದವ್, ಶಿವಪಾಲ್ ಸಿಂಗ್ ಯಾದವ್ ಅವರ ಪುತ್ರ ಸ್ಪರ್ಧಿಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಯಾದವ್ ಕುಟುಂಬಕ್ಕೆ ಅತ್ಯಂತ ಮಹತ್ವದ್ದಾಗಿದೆ.

Leave a Comment

Your email address will not be published. Required fields are marked *