Ad Widget .

ಹುಬ್ಬಳ್ಳಿ: ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿದ ವಿದ್ಯಾರ್ಥಿನಿ

ಸಮಗ್ರ ನ್ಯೂಸ್‌ : ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ.

Ad Widget . Ad Widget .

ಹುಬ್ಬಳ್ಳಿ ವಿಜಯನಗರದ ನಿವಾಸಿ ಬಸವರಾಜ ಆಲೂರ ಅವರ ಪುತ್ರಿ ರುಚಿತಾ ಮೊದಲ ಸಲ ಮತ ಹಾಕಿದ್ದಾರೆ. ಬೂತ್ ಸಂಖ್ಯೆ 75 ರಲ್ಲಿ ಮತ ಚಲಾಯಿಸಿ, ಮತದಾನದ ಮಹತ್ವ ಸಾರಿದ್ದಾರೆ.

Ad Widget . Ad Widget .

ಮತದಾನದ ಬಳಿಕ ಮಾತನಾಡಿದ ವಿದ್ಯಾರ್ಥಿನಿ, ನಮಸ್ಕಾರ ಎಲ್ಲರಿಗೂ. ನನ್ನ ಮೊದಲ ವೋಟ್‌ ಹಾಕಲು ಅಮೆರಿಕದಿಂದ ಬಂದಿದ್ದೇನೆ. ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ತಂದೆ-ತಾಯಿ ಸಹಕಾರದಿಂದ ಮತ ಚಲಾಯಿಸಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಭಾರತದ ಜವಾಬ್ದಾರಿಯುತ ನಾಗರಿಕರಾಗಿ ನೀವು ಕೂಡ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.

ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಹಾವೇರಿ, ಧಾರವಾಡ, ಬೀದರ್‌, ದಾವಣಗೆರೆ, ಚಿಕ್ಕೋಡಿ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ವಿಜಯಪುರ, ರಾಯಚೂರು, ಉತ್ತರ ಕನ್ನಡ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

Leave a Comment

Your email address will not be published. Required fields are marked *