Ad Widget .

ಗುಜರಾತ್‌: ಕಾಲಿನ ಮೂಲಕ ಮತದಾನ ಮಾಡಿ ಎಲ್ಲರಿಗೂ ಸ್ಫೂರ್ತಿಯಾದ ಯುವಕ

ಸಮಗ್ರ ನ್ಯೂಸ್‌ : ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಕಾಲುಗಳ ಮೂಲಕ ತಮ್ಮ ಹಕ್ಕು ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದ ಘಟನೆ ನಡೆದಿದೆ.

Ad Widget . Ad Widget .

ಯುವಕ ಅಂಕಿತ್‌ ಸೋನಿಯ ಮತದಾನ ಮಾಡಿದ ಬಳಿಕ ಮಾತನಾಡಿ, 20 ವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಶಾಕ್‌ ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ನನ್ನ ಗುರುಗಳು ಮತ್ತು ಶಿಕ್ಷಕರ ಆಶೀರ್ವಾದದಿಂದ ನಾನು ಚಿತ್ರ ಬಿಡಿಸಲು ಪ್ರಾರಂಭಿಸಿದೆ. ನಂತರ ಬರೆಯಲು ಪ್ರಾರಂಭಿಸಿದೆ.

Ad Widget . Ad Widget .

ಇದಾದ ಬಳಿಕ ನಾನು ಶಾಲೆಗೆ ಹೋಗಲು ಪ್ರಾರಂಭಿಸಿದೆ. ನಾನು ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೆ. ಜೊತೆಗೆ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಮಾಡಿ MBA ಮಾಡಿದೆ. ಕಳೆದ ಹಲವು ವರ್ಷಗಳಿಂದ ನಾನು ಹೀಗೆಯೇ ಮತ ಚಲಾಯಿಸುತ್ತಿದ್ದೇನೆ. ಜನರು ಹೊರಗೆ ಬಂದು ತಮ್ಮ ಅಮೂಲ್ಯವಾದ ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಮೂರನೇ ಹಂತದ ಲೋಕಸಭೆ ಚುನಾವಣೆಯು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ನಡೆಯುತ್ತಿದೆ.

Leave a Comment

Your email address will not be published. Required fields are marked *