Ad Widget .

ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ಶಾಂತಿಯುತ| ಉತ್ಸಾಹದಿಂದ ಮತ ಚಲಾಯಿಸಿದ ಉತ್ತರ ಕರ್ನಾಟಕ ಮಂದಿ

ಸಮಗ್ರ ನ್ಯೂಸ್: ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಬಿರುಸಿನಿಂದ ಆರಂಭಗೊಂಡು ಬಹುತೇಕ ಶಾಂತಿಯುತವಾಗಿ ನಡೆಯಿತು. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತು. ಹಲವು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಂಜೆ 5 ಗಂಟೆ ವೇಳೆಗೆ ಸರಾಸರಿ ಶೇ.66.05ರಷ್ಟು ಮತದಾನವಾಗಿ, ಮತದಾನ ಮಕ್ತಾಯದ ವೇಳೆಗೆ ಶೇ.70ಕ್ಕೂ ಹೆಚ್ಚು ಮತದಾನವಾಗಿದ್ದು,ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆಯುವ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬಂದಿತು. ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಈತನಕ ಶಾಂತಿಯುತವಾಗಿ ಮತದಾನ ನಡೆದಿದೆ.

Ad Widget . Ad Widget . Ad Widget .

21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರ ಅಳಿಯ ಚುನಾವಣಾ ಕಣದಲ್ಲಿ ಇದ್ದಾರೆ.

ಕಲಬುರಗಿಯಲ್ಲಿ ಅತಿಕಡಿಮೆ ಶೇ. 63.2 ರಷ್ಟು ಮತದಾನವಾಗಿದ್ದರೆ, ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.77.1 ರಷ್ಟು ಬಿರುಸಿನ ಮತದಾನವಾಗಿತ್ತು.ಬೆಳಗಾವಿ ಶೇ.70.5, ಬಾಗಲಕೋಟೆ ಶೇ.71 ಬಿಜಾಪುರ ಶೇ.65.4 ರಾಯಚೂರು ಶೇ.64.2 ಬೀದರ್‌ ಶೇ.65.3, ಕೊಪ್ಪಳ ಶೇ.70.5, ಬಳ್ಳಾರಿ ಶೇ.73.1 ಹಾವೇರಿ ಶೇ.76.3, ಧಾರವಾಡ ಶೇ.72.1, ಉತ್ತರಕನ್ನಡ ಶೇ.74.1, ದಾವಣಗೆರೆ ಶೇ.75.2 ಶಿವಮೊಗ್ಗದಲ್ಲಿ ಶೇ.76.8ರಷ್ಟು ಮತದಾನವಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ನಡೆದ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದರಲ್ಲಿ 1,29,48,978 ಪುರುಷರು, 1,29,66,570 ಮಹಿಳೆಯರು, 1945 ತೃತೀಯ ಲಿಂಗಿಗಳಿದ್ದಾರೆ. 6,90,929 ಯುವ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

Leave a Comment

Your email address will not be published. Required fields are marked *