ಬೆಂಗಳೂರಿನಲ್ಲಿ ಬಿಸಿಲ‌ ಬೇಗೆಗೆ ತಂಪೆರೆದ ವರುಣ| ಗುಡುಗು, ಮಿಂಚು ಸಹಿತ ಹಲವೆಡೆ ಉತ್ತಮ ಮಳೆ

ಸಮಗ್ರ ನ್ಯೂಸ್: ಬಿಸಿಲ ಧಗೆಗೆ ಸುಸ್ತಾಗಿದ್ದ ಉದ್ಯಾನನಗರಿಯಲ್ಲಿ ಇಂದು ಮತ್ತೆ ವರುಣ ತಂಪೆರೆದಿದ್ದಾನೆ. ಮಧ್ಯಾಹ್ನ ನಂತರ ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆ ಗುಡುಗು, ಮಿಂಚು, ಗಾಳಿ ಸಹಿತ ಧಾರಕಾರ ಮಳೆಯಾಗಿದೆ.

Ad Widget ... ..

ಹವಾಮಾನ ಇಲಾಖೆಯು ಇಂದು ಸಂಜೆಯೊಳಗೆ ಮಳೆಯ ಮುನ್ಸೂಚನೆ ನೀಡಿತ್ತು. ಮೆಜೆಸ್ಟಿಕ್, ಆರ್‌ ಟಿ ನಗರ, ಎಂ ಜಿ ರೋಡ್, ಕೆ ಆರ್ ಮಾರ್ಕೆಟ್, ಜಯನಗರ, ಜೆಜೆಆರ್ ನಗರ, ಟೌನ್ ಹಾಲ್ ಸುತ್ತಮುತ್ತ ಭಾರೀ ಮಳೆಯಾಗಿದೆ.

Ad Widget

ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮಲ್ಲೇಶ್ವರ, ವೈಯಾಲಿಕಾವಲ್, ಅರಮನೆ ಮೈದಾನ, ಶೇಷಾದ್ರಿಪುರ, ಯಶವಂತಪುರ ಸುತ್ತಮುತ್ತ ಆಲಿಕಲ್ಲು ಮಳೆಯಾಗುತ್ತಿದೆ. ವಿಧಾನಸೌಧ, ಕೆ.ಆರ್ ಸರ್ಕಲ್, ಕಾರ್ಪೋರೇಷನ್, ಟೌನ್ ಹಾಲ್ ಸುತ್ತಮುತ್ತ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Leave a Comment

Your email address will not be published. Required fields are marked *