Ad Widget .

ಎಐಸಿಸಿ ವಕ್ತಾರೆ ರಾಧಿಕಾ ಖೇರಾ ಬಿಜೆಪಿ ಸೇರ್ಪಡೆ

ಸಮಗ್ರ ನ್ಯೂಸ್: ಎಐಸಿಸಿ ವಕ್ತಾರೆ, ರಾಜಸ್ಥಾನದ ನಾಯಕಿ ರಾಧಿಕಾ ಖೇರಾ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದಾರೆ.

Ad Widget . Ad Widget .

ರಾಮನ ಭಕ್ತಿ ಎಂಬ ಕಾರಣಕ್ಕೆ, ರಾಮಲಲಾನ ದರುಶನ ಪಡೆದಿದ್ದಕ್ಕೆ ಕೌಶಲ್ಯ ಮಾತೆಯ ಭೂಮಿಯಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ರೀತಿ ಕರಾಳವಾಗಿದೆ. ಬಿಜೆಪಿ ಸರ್ಕಾರದ ರಕ್ಷಣೆ ಸಿಗದಿದ್ದರೆ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಕಾಂಗ್ರೆಸ್ ಆಗಿ ಉಳಿದಿಲ್ಲ. ಅದು ರಾಮ ವಿರೋಧಿ, ಹಿಂದು ವಿರೋಧಿಯಾಗಿದೆ ಎಂದು ಜಿಜೆಪಿ ಸೇರ್ಪಡೆ ಬಳಿಕ ಅವರು ಹೇಳಿದರು.

Ad Widget . Ad Widget .

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ರಾಧಿಕಾ ಖೇರಾ ಅವರು ರಾಮಮಂದಿರಕ್ಕೆ ಭೇಟಿ ಮತ್ತು ರಾಮಲಲಾ ಮೂರ್ತಿಯ ದರುಶನ ಪಡೆಯುವುದರಿಂದ ಪಕ್ಷದೊಳಗೆ ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದ್ದರು. ಇದಕ್ಕೂ ಮುನ್ನ ಖೇರಾ ಅವರ ಬಗೆಗಿನ ಅಗೌರವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ವೀಡಿಯೊ ವೈರಲ್ ಆಗಿತ್ತು. ಪಕ್ಷದಲ್ಲಿ ಯಾರೂ ವಿಶೇಷವಾಗಿ ಮಹಿಳಾ ರಾಜಕಾರಣಿಗಳನ್ನು ಗೌರವಿಸುವುದಿಲ್ಲ ಎಂದು ಹೇಳಿದ್ದರು.

Leave a Comment

Your email address will not be published. Required fields are marked *