ಟಿ 20 ವಿಶ್ವಕಪ್/ ವೈರಲ್ ಆದ ಭಾರತ ತಂಡದ ಹೊಸ ಜೆರ್ಸಿ

ಸಮಗ್ರ ನ್ಯೂಸ್: ಟಿ 20 ವಿಶ್ವಕಪ್ ಗೆ ವೇದಿಕೆ ಸಿದ್ದಗೊಂಡಿದ್ದು, ಭಾರತ ತಂಡವನ್ನು ಪ್ರಕಟ ಮಾಡಲಾಗಿದೆ. ಇದರ ಬೆನ್ನಲ್ಲೇ ಭಾರತ ನೂತನ ಜೆರ್ಸಿ ಬಿಡುಗಡೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.

Ad Widget ... ..

ಹೊಸ ಜೆರ್ಸಿಯ ಫೋಟೊವನ್ನು ಟಾಟಾ ಐಪಿಎಲ್ ಕಾಮೆಂಟ್ರಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಜತೆಗೆ ಇದೇ ಜೆರ್ಸಿಯಲ್ಲಿ ಭಾರತ ಟಿ20 ವಿಶ್ವಕಪ್‌ ಆಡಲಿದೆ ಎಂದು ಬರೆದುಕೊಂಡಿದೆ.

Ad Widget

ವೈರಲ್ ಆಗಿರುವ ಟೀಮ್ ಇಂಡಿಯಾದ ಜೆರ್ಸಿ ನೀಲಿ ಮತ್ತು ಕೇಸರಿ ಬಣ್ಣದ ಮಿಶ್ರಿತ ಕಂಡುಬಂದಿದೆ. ಜತೆಗೆ ಬಿಳಿ ಬಣ್ಣದ ಎರಡು ಗೆರೆಗಳಿವೆ. ಈ ಜೆರ್ಸಿಗಳನ್ನು ಶಾಫ್ ಒಂದರಲ್ಲಿ ಮಾರಾಟಕ್ಕಿಟ್ಟಂತೆ ಕಾಣುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್ 9 ರಂದು ಪಾಕ್ ವಿರುದ್ಧ ಆಡಲಿದೆ ಭಾರತ ತನ್ನ ಎಲ್ಲ ಲೀಗ್ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

Leave a Comment

Your email address will not be published. Required fields are marked *