Ad Widget .

ಸುಳ್ಯ: ಪರಿವಾರಕಾನದಲ್ಲಿ ಹೋಟೆಲ್ ವೃಷಭ ಶುಭಾರಂಭ

ಸಮಗ್ರ ನ್ಯೂಸ್: ವಿನೋದ್ ಸರಳಿಕುಂಜ ರವರ ಮಾಲಕತ್ವದ ಹೋಟೆಲ್ ವೃಷಭ ಮೇ.3 ರಂದು ಮಾಣಿ ಮೈಸೂರು ಹೆದ್ದಾರಿಯ ಪರಿವಾರಕಾನ ಶುಭಾರಂಭಗೊಂಡಿತು.

Ad Widget . Ad Widget .

ಬೆಳಗ್ಗೆ ಅರ್ಚಕ ಶಿವಪ್ರಸಾದ್ ಕೆದಿಲಾಯ ನಾಗಪಟ್ಟಣ ರವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಹಿರಿಯರಾದ ವೀಣಾವತಿ ಉದ್ಘಾಟಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ಆರಂಬೂರು ಶುಭ ಹಾರೈಸಿ, ಜಯರಾಮ ಶಾಂತಿನಗರ, ಶಿವಾನಂದ ಉಪ್ಪಳ, ವಿಜಯಶ್ರೀ, ವಾಣಿಶ್ರೀ ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು.

ಹೋಟೆಲ್ ನಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಊಟ ಉಪಹಾರದ ವ್ಯವಸ್ಥೆ ಇದ್ದು, ಬಾಳೆ ಎಲೆಯಲ್ಲಿ ಮೀನು ಊಟ, ನೀರ್ ದೋಸೆ, ಇಡ್ಲಿ, ಸಾದ ದೋಸೆ, ಪುಂಡಿ, ರೊಟ್ಟಿ, ಸೇಮಿಗೆ, ಕಲ್ಲಪ್ಪ, ನೈಪತ್ತಲ್, ವೆಳ್ಳಪ್ಪಮ್ ಮುಂತಾದ ಗ್ರಾಮೀಣ ಭಾಗದ ಆಹಾರ ಪದಾರ್ಥಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *