Ad Widget .

ಕಡಬ:ಮಹಿಳೆಯ ನಂಬರ್ ಕೇಳಿದ ಸುಳ್ಯದ ಡ್ರೈವರ್ ಗೆ ಸಿಕ್ತು ಬಿಸಿ ಬಿಸಿ‌ ಕಜ್ಜಾಯ

ಸಮಗ್ರ ನ್ಯೂಸ್: ಉರೂಸ್‌ ಸಮಾರಂಭಕ್ಕೆ ಬಂದಿದ್ದ ವಿವಾಹಿತ ವ್ಯಕ್ತಿಯೊಬ್ಬ ಅಲ್ಲಿದ್ದ ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದ ಕಾರಣಕ್ಕೆ ಸ್ಥಳದಲ್ಲಿದ್ದವರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಕಡಬ ತಾಲೂಕಿನ ಮರ್ದಾಳದ ನೆಕ್ಕಿತಡ್ಕದಲ್ಲಿ ಸಂಭವಿಸಿದೆ.

Ad Widget . Ad Widget .

ಸುಳ್ಯದಲ್ಲಿ ಲಾರಿ ಚಾಲಕನಾಗಿರುವ ನವಾಝ್ ಪಂಡಿತ್‌ ಎಂಬಾತ ಮಹಿಳೆಯ ನಂಬರ್‌ ಕೇಳಿ ಸ್ಥಳೀಯರಿಂದ ಥಳಿತಕ್ಕೊಳಗಾದ ವ್ಯಕ್ತಿ.

Ad Widget . Ad Widget .

ಉರೂಸ್‌ ವೇಳೆ ಮಹಿಳೆಯಲ್ಲಿ ಮೊಬೈಲ್‌ ನಂಬರ್‌ ಕೇಳಿದ ವಿಚಾರಕ್ಕೆ ಸಂಬಂಧಿಸಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿದೆ. ಥಳಿತಕ್ಕೊಳಗಾದ ವ್ಯಕ್ತಿ ಮರ್ದಾಳ ನಿವಾಸಿಗಳಾದ ಖಲೀಲ್‌ ಅನ್ಸರ್‌, ಶರೀಫ್‌ ಅವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾನೆ.

ಮಹಿಳೆಯ ಸಂಬಂಧಿ ಖಲೀಲ್‌ ಎಂಬಾತ ನವಾಝ್ ವಿರುದ್ಧ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಕಡಬ ಪೊಲೀಸ್‌ ಠಾಣೆಯಲ್ಲಿ ಇತ್ತಂಡಗಳ ದೂರಿನ ಅನ್ವಯ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *