Ad Widget .

ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಾಳೆ ಅಂದರೆ ಮೇ 7ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

Ad Widget . Ad Widget .

ಜಮಖಂಡಿ ತಾಲೂಕಿನ ಬಿದಿರಿಯ ಜನತಾ ಫ್ಲಾಟ್‌ನ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಿ.ಡಿ‌.ಸಿದ್ದಾಪುರ ಮೃತರು. ಇವರು ಬಸ್‌ನಲ್ಲಿ ಜಮಖಂಡಿಯಿಂದ ಮುಧೋಳಕ್ಕೆ ಹೋಗುವಾಗ ಹೃದಯಾಘಾತವಾಗಿದ್ದರಿಂದ ಕೊನೆಯುಸಿರೆದಿದ್ದಾರೆ. ಇವರು ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಶಿಕ್ಷಕ ನಿಯೋಜನೆಗೊಂಡಿದ್ದರು.

Ad Widget . Ad Widget .

Leave a Comment

Your email address will not be published. Required fields are marked *