Ad Widget .

ಬೀದರ್: ವಿಶೇಷ ಚೇತನರಿಗೆ ವಿಶೇಷ ಮತಗಟ್ಟೆಗಳ ಪರಿಚಯ

ಸಮಗ್ರ ನ್ಯೂಸ್‌ : ಬೆಂಗಳೂರಿನ ಅಂಗವಿಕಲರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತರಾದ ದಾಸ ಸೂರ್ಯವಂಶಿ ಅವರು ಇತ್ತೀಚಿಗೆ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿಶೇಷ ಚೇತನರಿಗೆ ಇರುವ ವಿಶೇಷ ಮತಗಟ್ಟೆಗಳ ಪರಿಚಯ ಮಾಡಿದರು.

Ad Widget . Ad Widget .

ಪರಿಶೀಲನೆ ಸಮಯದಲ್ಲಿ ವಿಶೇಷ ಚೇತನರಿಗೆ ಇರುವ ಚುನಾವಣೆಯಲ್ಲಿ ಮತದಾನ ಮಾಡಲು ವಿಕಲಚೇತನ ಸ್ನೇಹಿ ರಾಂಪ್, ರಿಯಲಿಂಗ್, ಶೌಚಾಲಯ, ವ್ಹಿಲಚೇರ ಸೌಲಭ್ಯಗಳ ಪರಿಶೀಲನೆ ಮಾಡಿ ಕೇಲವು ತಿದ್ದುಪಡಿ ಸಲಹೆಯೊಂದಿಗೆ ಮೆಚ್ಚುಗೆ ಪಡೆದರು ಬೀದರ್ ಲೋಕಸಭಾ ಕೇಂದ್ರ ಹಾಗೂ ವಿಭಾಗದಲ್ಲಿ ಬೀದರ್ ಲೋಕಸಭಾ ಕ್ಷೇತ್ರಗಳ ಎಲ್ಲಾ ಅರ್ಹ ವಿಶೇಷ ಚೇತನರು ಮತದಾನ ಪ್ರಕ್ರಿಯೆ ಒಳಗೊಳ್ಳುವಿಕೆಯಾಗಿ ಮತದಾನ ಮಾಡಲು ಸಲಹೆ ನೀಡಿದರು.

Ad Widget . Ad Widget .

ಸಾರ್ವತ್ರಿಕ ಲೋಕಸಭಾ ಚುನಾವಣೆ 2024ರ ಹಿನ್ನೆಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ 06 ವಿಧಾನ ಸಭಾ ಕ್ಷೇತ್ರಗಳು ಒಳಗೊಂಡಿದ್ದು, ಬೀದರ್ ಜಿಲ್ಲೆಯಲ್ಲಿ ಒಟ್ಟು ಸಾಮಾನ್ಯ ಮತದಾರರು 18,92,962 ಇದ್ದು, ಅದರಲ್ಲಿ ಮಹಿಳಾ ಮತದಾರರು 9,21,435, ಪುರುಷ ಮತದಾರರು 9,71,424 ವಿಕಲಚೇತನರ ಮತದಾರರು ವಿಧಾನ ಸಭಾ ಕ್ಷೇತ್ರವಾರು ಹಾಗೂ ಅಂಗವಿಕಲಚೇತನ ದೃಷ್ಟಿದೋಷವುಳ್ಳ ಮತದಾರರು 4138, ದೈಹಿಕ ವಿಕಲಚೇತನ ಮತದಾರರು 11168 ಶ್ರವಣದೊಷವುಗಳ್ಳ ಮತದಾರರು 4107 ಹಾಗೂ ಇತರೆ ವಿಕಲಚೇತನ ಮತದಾರರು 4178 ಒಟ್ಟು: 23591 ವಿಕಲಚೇತನರಿಗೆ ಸುಗಮ ಮತದಾನಕ್ಕಾಗಿ ಸ್ನೇಹಿ ರಾಂಪ್, ರಿಯಲಿಂಗ್, ಶೌಚಾಲಯ, ವ್ಹಿಲಚೇರ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

Leave a Comment

Your email address will not be published. Required fields are marked *